ಬಿರುಬಿಸಿಲಿನ ನಡುವೆಯೇ ಲಾಕ್ ಮಾಡಲಾಗಿದ್ದ ಕಾರಿನ ಒಳಗಿದ್ದ ನಾಯಿಗಳನ್ನು ಬ್ರಿಟನ್‌ನ ಬ್ರೈಟನ್‌ನ ಪೊಲೀಸರು ರಕ್ಷಿಸಿದ್ದಾರೆ.
ಕಾರಿನ ಕಿಟಕಿ ಗಾಜುಗಳನ್ನು ಒಡೆಯುವ ಮೂಲಕ ಪೊಲೀಸ್ ಅಧಿಕಾರಿ ನಾಯಿಗಳನ್ನು ರಕ್ಷಿಸಿದ್ದಾರೆ. ಕಾರಿನ ಒಳಗೆ ಅಕ್ಷರಶಃ ಕುದಿಯುವಷ್ಟು ತಾಪದಲ್ಲಿ ನರಳುತ್ತಿದ್ದ ನಾಯಿಗಳನ್ನು ರಕ್ಷಿಸಿದ್ದಕ್ಕೆ ಖುಷಿ ಪಡುವ ಬದಲಿಗೆ ಕಾರಿನ ಮಾಲಕಿ ತಮ್ಮ ಕಾರಿನ ಗಾಜು ಒಡೆದು ಹಾಕಿದ್ದಕ್ಕೆ ದೂರು ಕೊಟ್ಟಿದ್ದಾರೆ.
ಕ್ಷಮೆ ಕೋರಿದ ʼಡಾಬಾ ಬಾಬಾʼನ ಭೇಟಿಯಾದ ಯೂಟ್ಯೂಬರ್
ತಮ್ಮ ಬೇಟನ್ ಬಳಸಿಕೊಂಡು ಕಾರಿನ ಕಿಟಕಿ ಗಾಜನ್ನು ಒಡೆದು ತೆಗೆಯುತ್ತಿರುವ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್ ಆಗಿದೆ. ಇದಾದ ಬಳಿಕ ಪೊಲೀಸ್ ಅಧಿಕಾರಿ ಹಾಗೂ ಕಾರಿನ ಮಾಲಕಿ ನಡುವೆ ಮಾತುಕತೆಯನ್ನೂ ನೋಡಬಹುದಾಗಿದೆ.
“ನೀವು ನನ್ನ ಕಿಟಕಿ ಒಡೆದುಹಾಕಿದ್ದೀರಿ” ಎಂದು ಹೌಹಾರಿದ ಕಾರಿನ ಮಾಲಕಿಗೆ ಉತ್ತರಿಸಿದ ಪೊಲೀಸ್ ಅಧಿಕಾರಿ, “ಇದು ಬಿಸಿಲಿನ ದಿನ. ಈ ಹವಾಮಾನದಲ್ಲಿ ನೀವು ನಾಯಿಯನ್ನು ಕಾರಿನಲ್ಲಿ ಹಾಗೆ ಬಿಡುವಂತಿಲ್ಲ” ಎಂದು ಆಕೆಗೆ ತಿಳಿಸಿದ್ದಾರೆ.