alex Certify ನಿಗೂಢವಾಗಿ ನಾಪತ್ತೆಯಾದ ಜೆಡಿಎಸ್ ಮಾಜಿ ಕಾರ್ಪೊರೇಟರ್ ಪತಿ: ವಾರ ಕಳೆದರೂ ಸಿಗದ ಸುಳಿವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಗೂಢವಾಗಿ ನಾಪತ್ತೆಯಾದ ಜೆಡಿಎಸ್ ಮಾಜಿ ಕಾರ್ಪೊರೇಟರ್ ಪತಿ: ವಾರ ಕಳೆದರೂ ಸಿಗದ ಸುಳಿವು

ಬೆಂಗಳೂರು: ಜೆಡಿಎಸ್ ಮಾಜಿ ಕಾರ್ಪೊರೇಟರ್ ಪತಿ ನಿಗೂಢವಾಗಿ ನಾಪತ್ತೆಯಾಗಿ ವಾರ ಕಳೆದರೂ ಸುಳಿವು ದೊರೆತಿಲ್ಲ. ಬಿನ್ನಿಪೇಟೆ ಮಾಜಿ ಕಾರ್ಪೊರೇಟರ್ ಐಶ್ವರ್ಯಾ ಅವರ ಪತಿ ಲೋಹಿತ್ ಮಾರ್ಚ್ 29 ರಂದು ನಂದಗುಡಿಯ ಜಮೀನಿಗೆ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಬಳಿ ಹೆದ್ದಾರಿ ಪಕ್ಕದಲ್ಲಿ ಅವರ ಕಾರು ಪತ್ತೆಯಾಗಿದೆ. ಟಯರ್ ಪಂಕ್ಚರ್ ಆದ ಸ್ಥಿತಿಯಲ್ಲಿ ಕಾರ್ ಪತ್ತೆಯಾಗಿದ್ದು, ದೇವಸ್ಥಾನದ ಸಮೀಪ ಚಪ್ಪಲಿ ಮತ್ತು ಬೆಲ್ಟ್ ಪತ್ತೆಯಾಗಿದ್ದು, 2 ವಿಶೇಷ ಪೊಲೀಸ್ ತಂಡಗಳು ಲೋಹಿತ್ ಅವರ ಪತ್ತೆಗಾಗಿ ತನಿಖೆ ಮುಂದುವರೆಸಿವೆ.

ನಾಲ್ಕು ಸಾವಿರಕ್ಕೂ ಅಧಿಕ ಫೋನ್ ಕರೆಗಳನ್ನು ಪರಿಶೀಲನೆ ನಡೆಸಲಾಗಿದ್ದು, 100 ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ಕೂಡ ಪರಿಶೀಲನೆ ನಡೆಸಿ ಲೋಹಿತ್ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ನಂದಗುಡಿ ಮೀಸಲು ಅರಣ್ಯ ಪ್ರದೇಶದ ನೀಲಗಿರಿ ತೋಪುಗಳಲ್ಲಿ ಡ್ರೋನ್ ಮೂಲಕ ಸರ್ಚಿಂಗ್ ನಡೆಸಲಾಗಿದೆ. ಎಲ್ಲಾ ಆಯಾಮಗಳಲ್ಲಿ ಶೋಧ ಕಾರ್ಯ ನಡೆದಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ. ಇದರಿಂದ ಕುಟುಂಬದವರ ಆತಂಕ ಹೆಚ್ಚಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...