alex Certify ಕಣ್ಣಂಚನ್ನು ತೇವಗೊಳಿಸುತ್ತೆ ತಂದೆ ಕಳೆದುಕೊಂಡ ಬಾಲಕನಿಗಾಗಿ ಪೊಲೀಸರು ಮಾಡಿರುವ ಮಾನವೀಯ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ತಂದೆ ಕಳೆದುಕೊಂಡ ಬಾಲಕನಿಗಾಗಿ ಪೊಲೀಸರು ಮಾಡಿರುವ ಮಾನವೀಯ ಕಾರ್ಯ

Police department gifts young boy a 'support dog' after his father was  killed; gesture earns parise | Trending & Viral Newsಚಿಕ್ಕ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಳ್ಳುವುದು ಮಕ್ಕಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ನಷ್ಟವು ಹಾನಿಕಾರಕ ಜೀವಿತಾವಧಿಯ ಪರಿಣಾಮವನ್ನು ಸಹ ಹೊಂದಿರಬಹುದು. ಪೋಷಕರಿಲ್ಲದೆ ಇರುವುದು ಮಗುವಿನ ಜೀವನಕ್ಕೆ ಸವಾಲಾಗಿರುತ್ತದೆ. ಇದನ್ನು ಕ್ವೀನ್ಸ್ ಲ್ಯಾಂಡ್ ಪೊಲೀಸರು ಬಹುಶಃ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದೆನಿಸುತ್ತದೆ.

ಹೌದು, ವರ್ಷದಾರಂಭದಲ್ಲಿ ಬಾಲಕನೊಬ್ಬನ ತಂದೆ ತನ್ನ ಪತ್ನಿಯಿಂದಲೇ ಹತ್ಯೆಗೊಳಗಾಗಿದ್ದರು. ಅವರು ಸಾಯುವ ಮುನ್ನ ರೆಮಿ ರೂಗೆ ನಾಯಿಯನ್ನು ಉಡುಗೊರೆಯಾಗಿ ಕೊಡುವುದಾಗಿ ಹೇಳಿದ್ದರು. ಆದರೆ ಶ್ವಾನವನ್ನು ಗಿಫ್ಟ್ ಆಗಿ ತನ್ನ ಪುತ್ರನಿಗೆ ಕೊಡುವ ಮುನ್ನವೇ ಅವರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ತಂದೆಯ ಸಾವಿನಿಂದ ರೆಮಿ ಕಂಗಾಲಾಗಿ ಹೋಗಿದ್ದ. ಇನ್ನು ಈ ವಿಷಯ ತಿಳಿದ ಕ್ವೀನ್ಸ್ ಲ್ಯಾಂಡ್ ನ ಪೊಲೀಸ್ ಅಧಿಕಾರಿಗಳು ಕಾಪರ್ ಎಂಬ ಲ್ಯಾಬ್ರಡಾರ್ ನಾಯಿಮರಿಯನ್ನು ದತ್ತು ಪಡೆದು ರೆಮಿಗೆ ಉಡುಗೊರೆಯಾಗಿ ಒಪ್ಪಿಸಿದ್ದಾರೆ.

ಸ್ವಾಭಾವಿಕವಾಗಿ ರೆಮಿ ನಾಯಿ ಮರಿಯನ್ನು ನೋಡಿದ ನಂತರ ಹಾಗೂ ಅದಿನ್ನು ನಿನ್ನದೇ ಅಂತಾ ಪೊಲೀಸ್ ಅಧಿಕಾರಿ ಹೇಳಿದಾಗ, ರೆಮಿ ಸಂತೋಷದಿಂದ ಕುಣಿದಾಡಿದ್ದಾನೆ.

ಬಾಲಕನ ದುಃಖವನ್ನು ನೋಡಲಾಗದೆ, ಆತನಿಗಾಗಿ ಏನಾದರೂ ಮಾಡಬೇಕೆಂದು ಪೊಲೀಸರು ಅಂದುಕೊಂಡಿದ್ದರಂತೆ. ನೀಲಿ ಸೂಟ್ ಧರಿಸಿರುವ ಪೊಲೀಸರು ಕೂಡ ಮನುಷ್ಯರೇ ತಾನೇ ಎಂದಿರುವ ಪೇದೆ ಕರೆನ್ ಎಡ್ವರ್ಡ್, ಪೊಲೀಸ್ ಇಲಾಖೆಯೇ ಬಾಲಕನಿಗೆ ಉಡುಗೊರೆ ನೀಡಲು ಮುಂದೆ ಬಂದಿದ್ದಾಗಿ ಹೇಳಿದ್ದಾರೆ.

ಇಷ್ಟೇ ಅಲ್ಲ ನಿಧಿಯನ್ನು ಕೂಡ ಸಂಗ್ರಹಿಸಲಾಗುತ್ತಿದೆ. ಇದಕ್ಕೆಂದೇ ಕ್ವೀನ್ಸ್‌ಲ್ಯಾಂಡ್ ಪೊಲೀಸ್ ಸೇವೆಯ ಸ್ಟಾಫರ್ಡ್ ವಿಭಾಗವು ಗೋಫೌಂಡ್ ಮಿ ಎಂಬ ಪುಟವನ್ನು ತೆರೆದಿದ್ದು, ಈಗಾಗಲೇ 6000 ಡಾಲರ್ ಗುರಿಯನ್ನು ದಾಟಿದೆ.

— 7NEWS Brisbane (@7NewsBrisbane) November 22, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...