alex Certify ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆಗೆ POCSO ಜಾರಿ: ಯುವ ವಯಸ್ಕರ ಸಮ್ಮತಿ ಸಂಬಂಧ ಅಪರಾಧವೆನ್ನಲು ಅಲ್ಲ: ದೆಹಲಿ ಹೈಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆಗೆ POCSO ಜಾರಿ: ಯುವ ವಯಸ್ಕರ ಸಮ್ಮತಿ ಸಂಬಂಧ ಅಪರಾಧವೆನ್ನಲು ಅಲ್ಲ: ದೆಹಲಿ ಹೈಕೋರ್ಟ್

ನವದೆಹಲಿ: ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆಗೆ POCSO ಜಾರಿ ಮಾಡಲಾಗಿದೆ. ಯುವ ವಯಸ್ಕರ ಸಮ್ಮತಿ ಸಂಬಂಧ ಅಪರಾಧೀಕರಿಸಲು ಅಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ(ಪೋಕ್ಸೊ) ಅಡಿಯಲ್ಲಿ ಅಪಹರಣ ಮತ್ತು ಅಪರಾಧಗಳಿಗೆ ಪ್ರಕರಣ ದಾಖಲಿಸಲ್ಪಟ್ಟ ವ್ಯಕ್ತಿಗೆ ಜಾಮೀನು ನೀಡುವಾಗ ದೆಹಲಿ ಹೈಕೋರ್ಟ್, ಈ ಕಾಯ್ದೆ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವ ಉದ್ದೇಶ ಹೊಂದಿದೆ. ಯುವ ವಯಸ್ಕರ ನಡುವಿನ ಸಮ್ಮತಿಯ ಪ್ರಣಯ ಸಂಬಂಧಗಳನ್ನು ಅಪರಾಧ ಮಾಡುವುದಕ್ಕಲ್ಲ ಎಂದು ಹೇಳಿದೆ. .

ಅಕ್ಟೋಬರ್ 20 ರ ತಮ್ಮ ಆದೇಶದಲ್ಲಿ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ಏಕಸದಸ್ಯ ಪೀಠ, ಪೋಕ್ಸೋ ಕಾಯ್ದೆ, ಅಪಹರಣ(ಸೆಕ್ಷನ್ 6) ಮತ್ತು ಕುಮ್ಮಕ್ಕು(ಸೆಕ್ಷನ್ 17) ಅಡಿಯಲ್ಲಿ ಆರೋಪಿಯ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಅಭಿಪ್ರಾಯ ನೀಡಿದೆ. ಐಪಿಸಿ ಅಡಿಯಲ್ಲಿ(ಸೆಕ್ಷನ್ 363) ಮತ್ತು ಅತ್ಯಾಚಾರ (ಸೆಕ್ಷನ್ 376). ಲೈಂಗಿಕ ಅಪರಾಧದಿಂದ ಬದುಕುಳಿದವರನ್ನು ಒತ್ತಡ ಅಥವಾ ಆಘಾತದ ಅಡಿಯಲ್ಲಿ ಇತ್ಯರ್ಥಪಡಿಸಲು ಒತ್ತಾಯಿಸಬಹುದಾದ ಪ್ರಕರಣಗಳಿರುವುದರಿಂದ ಪ್ರತಿ ಪ್ರಕರಣದ ವಾಸ್ತವಗಳು ಮತ್ತು ಸಂದರ್ಭಗಳಿಂದ ಇದನ್ನು ನೋಡಬೇಕು ಎಂದು HC ಗಮನಿಸಿದೆ.

17 ವರ್ಷದ ಹುಡುಗಿಯೊಬ್ಬಳು ಜೂನ್ 30, 2021 ರಂದು ಒಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು, ಆದರೆ, ಅವಳು ಅವನೊಂದಿಗೆ ಇರಲು ಬಯಸಲಿಲ್ಲ. ಅಕ್ಟೋಬರ್ 27, 2021 ರಂದು, ಅವಳು ಆರೋಪಿಯ ಮನೆಗೆ ಹೋದಳು, ಅವಳ ಸ್ನೇಹಿತ ಅವಳನ್ನು ಪಂಜಾಬ್‌ ಗೆ ಕರೆದೊಯ್ದು ಅವರು ಮದುವೆಯಾದರು. ನಂತರ ಬಾಲಕಿಯ ತಂದೆ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಕರೆದೊಯ್ದಿದ್ದಾರೆ ಎಂದು ಆರೋಪಿಸಿದರು.

ನ್ಯಾಯಮೂರ್ತಿ ಸಿಂಗ್ ಅವರು ರಾಜ್ಯದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಸಮ್ಮುಖದಲ್ಲಿ ಸಂತ್ರಸ್ತೆಯೊಂದಿಗೆ ಸಂವಾದ ನಡೆಸಿದರು. ಅಕ್ಟೋಬರ್ 28 ರಂದು ಆರೋಪಿಯೊಂದಿಗಿನ ವಿವಾಹದ ಸಮಯದಲ್ಲಿ ಅವಳು ಸುಮಾರು 17 ವರ್ಷ ವಯಸ್ಸಿನವಳಾಗಿದ್ದಳು. ಆಕೆಯ ಜನ್ಮ ದಿನಾಂಕ ಅಕ್ಟೋಬರ್ 1, 2004 ಆಗಿದೆ.

ಯಾವುದೇ ಅನಗತ್ಯ ಪ್ರಭಾವ, ಬೆದರಿಕೆ, ಒತ್ತಡ ಅಥವಾ ಬಲವಂತವಿಲ್ಲದೆ ತನ್ನ ಸ್ವಂತ ಇಚ್ಛೆಯಿಂದ ಆರೋಪಿಯನ್ನು ಮದುವೆಯಾಗಿದ್ದೇನೆ. ಅವನೊಂದಿಗೆ ಇರಲು ಬಯಸುತ್ತೇನೆ ಎಂದು ಆಕೆ ತಿಳಿಸಿದ್ದಾಳೆ. ಆಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಮೊರೆ ಹೋಗಿದ್ದಾಳೆ. ಆರೋಪಿಯನ್ನು ಇಷ್ಟಪಟ್ಟು ಮದುವೆಯಾಗಿದ್ದಾಳೆ. ತನ್ನ ಪೋಷಕರು ತನಗೆ ಮತ್ತು ಅವಳ ಪತಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ ಎಂಬುದನ್ನು ಹೈಕೋರ್ಟ್ ಗಮನಿಸಿದೆ. ಇದರ ಅನ್ವಯ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ದಂಪತಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಸೂಚಿಸಿದೆ.

ಇದು ಆರೋಪಿಯೊಂದಿಗೆ ಹುಡುಗಿಯನ್ನು ಸಂಬಂಧಕ್ಕೆ ಬಲವಂತಪಡಿಸಿದ ಪ್ರಕರಣವಲ್ಲ ಎಂದು ಹೈಕೋರ್ಟ್  ಗಮನಿಸಿದೆ. ವಾಸ್ತವವಾಗಿ, ಆಕೆ ಸ್ವತಃ ಆರೋಪಿಯ ಮನೆಗೆ ಹೋಗಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಳು. ಇದು ಇಬ್ಬರ ನಡುವಿನ ಪ್ರಣಯ ಸಂಬಂಧ ಮತ್ತು ಅವರ ನಡುವಿನ ಲೈಂಗಿಕ ಕ್ರಿಯೆಯು ಒಪ್ಪಿಗೆಯಿಂದ ಕೂಡಿದೆ ಎಂದು ಸಂತ್ರಸ್ತೆಯ ಹೇಳಿಕೆಯು ಸ್ಪಷ್ಟಪಡಿಸುತ್ತದೆ. ಸಂತ್ರಸ್ತೆ ಅಪ್ರಾಪ್ತ ವಯಸ್ಸಿನವಳಾಗಿದ್ದರೂ, ಆಕೆಯ ಒಪ್ಪಿಗೆ ಯಾವುದೇ ಕಾನೂನುಬದ್ಧತೆಯನ್ನು ಹೊಂದಿಲ್ಲವಾದರೂ, ಜಾಮೀನು ನೀಡುವಾಗ ಪ್ರೀತಿಯಿಂದ ಹುಟ್ಟಿಕೊಂಡ ಒಮ್ಮತದ ಸಂಬಂಧದ ಅಂಶವನ್ನು ಪರಿಗಣಿಸಬೇಕು ಎಂದು ನಾನು ಅಭಿಪ್ರಾಯಪಟ್ಟಿದ್ದೇನೆ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದಾರೆ.

POCSO ಯ ಸ್ವರೂಪ ಮತ್ತು ಉದ್ದೇಶದ ಕುರಿತು, ವಿಜಯಲಕ್ಷ್ಮಿ ವರ್ಸಸ್ ಸ್ಟೇಟ್‌ ನಲ್ಲಿ ಜನವರಿ 2021 ರ ಮದ್ರಾಸ್ ಹೈಕೋರ್ಟಿನ ಆದೇಶವನ್ನು ದೆಹಲಿ HC ಉಲ್ಲೇಖಿಸಿದೆ.

ನ್ಯಾಯಾಲಯದ ಮುಂದೆ ವಿಚಾರಣೆಗಳು ಜಾಮೀನು ಮಂಜೂರಾತಿಗಾಗಿಯೇ ಹೊರತು ಎಫ್‌ಐಆರ್ ರದ್ದುಗೊಳಿಸುವುದಕ್ಕಾಗಿ ಅಲ್ಲ ಎಂದು ಹೇಳಿದೆ. ವ್ಯಕ್ತಿಗೆ ತಲಾ 10,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿ ಬಾಂಡ್ ಒದಗಿಸುವಂತೆ ಸೂಚಿಸಲಾಯಿತು. ಸಂಬಂಧಪಟ್ಟ ತನಿಖಾಧಿಕಾರಿ ಕರೆದಾಗ ತನಿಖೆಗೆ ಸಹಕಾರ ನೀಡುವಂತೆ ಸೂಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...