ಕೃಷಿ ಸುಧಾರಣಾ ಕಾಯಿದೆಗಳಿಂದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ಅಥವಾ ಮಂಡಿ ಮೂಲಕ ಬೆಳೆ ಕ್ರೋಢೀಕರಿಸುವ ಕ್ರಿಯೆಗಳು ಅಂತ್ಯವಾಗುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
“ಮಂಡಿಗಳು ಆಧುನೀಕರಣಗೊಳ್ಳಲಿವೆ ಎಂದು ನಾನು ನಿಮಗೆ ಖಾತ್ರಿ ನೀಡುತ್ತೇನೆ. ಇಷ್ಟೇ ಅಲ್ಲ, ಕನಿಷ್ಠ ಬೆಂಬಲ ಬೆಲೆ ಸಹ ಯಾವಾಗಲೂ ಇರಲಿವೆ. ದೇಶದ ಜನಸಂಖ್ಯೆಯ 80% ಜನರಿಗೆ ಕೊಡಲಾಗುತ್ತಿದ್ದ ಅಗ್ಗದ ದರದ ಪಡಿತರ ಮುಂದುವರೆಯಲಿದೆ. ದಯವಿಟ್ಟು ವದಂತಿಗಳನ್ನು ಹಬ್ಬಿಸಬೇಡಿ. ರೈತರ ಆದಾಯಗಳನ್ನು ಹೆಚ್ಚಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಬೇಕಿದೆ” ಎಂದು ಮೋದಿ ತಿಳಿಸಿದ್ದಾರೆ.
ಭಾರತೀಯರ ಸಹಕಾರದಿಂದ ʼಟೆಲಿಗ್ರಾಂʼ ಮಾಡಿದೆ ಈ ಸಾಧನೆ
ದೇಶಾದ್ಯಂತ ಇರುವ ರೈತರ ಪೈಕಿ 2/3ರಷ್ಟು ಮಂದಿಯ ಬಳಿ ಸಣ್ಣ ಪ್ರಮಾಣದ ಭೂಮಿ ಇದ್ದು, ಹೊಸ ಕಾನೂನುಗಳಿಂದ ಅವರಿಗೆ ತಮ್ಮ ಉತ್ಪನ್ನಗಳನ್ನು ಇಷ್ಟಪಟ್ಟ ಕಡೆಗಳಲ್ಲಿ ಮಾರಾಟ ಮಾಡಲು ಸ್ವತಂತ್ರ‍್ಯ ಕೊಡಲಾಗುತ್ತಿದೆ ಎಂದ ಮೋದಿ, ಎರಡೂವರೆ ತಿಂಗಳುಗಳಿಂದ ಮಾಡುತ್ತಿರುವ ಪ್ರತಿಭಟನೆಗಳನ್ನು ಹಿಂಪಡೆದುಕೊಂಡು, ಕೃಷಿ ಸುಧಾರಣೆಗಳು ಅನುಷ್ಠಾನಗೊಳ್ಳಲು ದಯವಿಟ್ಟು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.