ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗೆ ಭೇಟಿಯಾದ ದಿನಗಳ ಬಳಿಕ, “ಪ್ರಧಾನಿ ಮೋದಿ ಅವರು ದೇಶದ ಅಗ್ರ ನಾಯಕರಾಗಿದ್ದಾರೆ,” ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ಜನಪ್ರಿಯತೆಯ ಗ್ರಾಫ್ ಕುಗ್ಗುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರವಿತ್ತ ಸಂಜಯ್, “ನಾನು ಈ ಬಗ್ಗೆ ಕಾಮೆಂಟ್ ಮಾಡಲು ಇಚ್ಛಿಸುವುದಿಲ್ಲ. ನಾನು ಮಾಧ್ಯಮಗಳ ವರದಿಗಳನ್ನು ನೋಡುವುದಿಲ್ಲ. ಕಳೆದ ಏಳು ವರ್ಷಗಳು ಹಾಗೂ ಸದ್ಯದ ಮಟ್ಟದಲ್ಲೂ ಸಹ ಬಿಜೆಪಿಯ ಯಶಸ್ಸಿಗೆ ನರೇಂದ್ರ ಮೋದಿಯೇ ಕಾರಣ. ಸದ್ಯದ ಮಟ್ಟಿಗೆ ಅವರು ದೇಶದ ಹಾಗೂ ತಮ್ಮ ಪಕ್ಷದ ದೊಡ್ಡ ನಾಯಕರು” ಎಂದು ತಿಳಿಸಿದ್ದಾರೆ.
ನಾಳೆ ನಡೆಯಬೇಕಿದ್ದ ಮೈಸೂರು ಪಾಲಿಕೆ ಮೇಯರ್ ಚುನಾವಣೆಗೆ ತಡೆ ನೀಡಿದ ಹೈಕೋರ್ಟ್…!
ಸದ್ಯ ಮಹಾರಾಷ್ಟ್ರದ ಉತ್ತರ ಭಾಗದಲ್ಲಿ ಪ್ರವಾಸದಲ್ಲಿರುವ ಸಂಜಯ್, ಜಲಗಾಂವ್‌ನಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, “ಪ್ರಧಾನ ಮಂತ್ರಿ ಯಾವುದೋ ಒಂದು ಪಕ್ಷಕ್ಕೆ ಸೀಮಿತರಾಗದೇ ಇಡೀ ದೇಶಕ್ಕೆ ಸೇರಿದವರು ಎಂಬುದು ಶಿವಸೇನಾದ ನಿಲುವಾಗಿದೆ. ಹಾಗಾಗಿ ಅವರು ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬಾರದು, ಇದರಿಂದ ಆಡಳಿತ ಯಂತ್ರದ ಮೇಲೆ ಒತ್ತಡ ಬೀಳುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಕೇವಲ103 ರೂಪಾಯಿಗೆ ಲಭ್ಯವಿದೆ 2 ಕೊಠಡಿಗಳ್ಳುಳ್ಳ ಈ ಸುಂದರ ಮನೆ..!
ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶಗಳ ಬಗ್ಗೆ ಮಾತನಾಡಿದ ರಾವತ್, “ಮೋದಿ ಹಾಗೂ ಅಮಿತ್ ಶಾ ಸೋಲರಿಯದ ಸರದಾರರೇನಲ್ಲ ಎಂದು ಟಿಎಂಸಿ ತೋರಿಸಿದೆ,” ಎಂದಿದ್ದಾರೆ.