ಶ್ರೀನಗರ: ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಅವರು ಭಾಷಣ ಮಾಡುತ್ತಿದ್ದರು. ಅವರ ನಿರರ್ಗಳ ಭಾಷಣಕ್ಕೆ ಜನರು ಮನಸೋತು ಕೂತಿದ್ದರು. ಅದೇ ವೇಳೆ ಮಸೀದಿಯ ಮಧ್ಯಾಹ್ನದ ಪ್ರಾರ್ಥನೆ ‘ಆಜಾನ್’ ಶುರುವಾಗಿ, ಧ್ವನಿವರ್ಧಕದಲ್ಲಿ ಕೇಳಿಸತೊಡಗಿತು. ಕೂಡಲೇ ತಮ್ಮ ಭಾಷಣಕ್ಕೆ ಅಲ್ಪವಿರಾಮ ನೀಡಿದರು.
ಅಂದಿನಿಂದಲೂ ಅವರು ನನ್ನ ಹೃದಯ ಗೆದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ 28 ವರ್ಷದ ಫಾಹಿಮ್ ನಾಜಿರ್ ಷಾ ಅವರು.
ಜಮ್ಮು ಮತ್ತು ಕಾಶ್ಮೀರದಿಂದ ದಿಲ್ಲಿಯವರೆಗಿನ 815 ಕಿ.ಮೀ. ಅವರು ನಡೆದುಕೊಂಡು ಬರುತ್ತಿದ್ದಾರೆ. ಅದಕ್ಕೆ ಕಾರಣ ತನ್ನ ಇಷ್ಟದ ವ್ಯಕ್ತಿಯಾದ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಎಂದು ತಿಳಿದುಬಂದಿದೆ.
SBI ನಿಂದ ದಾಲ್ ಸರೋವರದಲ್ಲಿ ತೇಲುವ ಎಟಿಎಂ…!
ಸದ್ಯ ಅವರು 200 ಕಿ.ಮೀ. ನಡೆದು ಉಧಮ್ಪುರ ಸೇರಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದರಿಂದ ಕಣಿವೆಯಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿದೆ ಎಂದು ಷಾ ಅವರು ಅಭಿಪ್ರಾಯಪಟ್ಟಿದ್ದಾರೆ.