ಅಹಮದಾಬಾದ್: ಮಾರಕ ಕೊರೋನಾ ಸೋಂಕಿನಿಂದ ಪ್ರಧಾನಿ ಮೋದಿಯವರ ಚಿಕ್ಕಮ್ಮ ಸಾವನ್ನಪ್ಪಿದ್ದಾರೆ. ಗುಜರಾತ್ ನ ಅಹಮದಾಬಾದ್ ಆಸ್ಪತ್ರೆಯಲ್ಲಿ ಮೋದಿ ಚಿಕ್ಕಮ್ಮ ನರ್ಮದಾ ಬೆನ್ ಅವರು ಮೃತಪಟ್ಟಿದ್ದಾರೆ.
ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ನರ್ಮದಾ ಬೆನ್ ಚಿಕಿತ್ಸೆ ಪಡಯುತ್ತಿದ್ದರು. ಅಹಮದಾಬಾದ್ ಸಿವಿಲ್ ರಾಣಿಪ್ ಪ್ರದೇಶದಲ್ಲಿ ವಾಸವಾಗಿದ್ದರು. ಕೋವಿಡ್ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.