alex Certify ಸುಭಾಷ್ ಚಂದ್ರ ಬೋಸ್ ಜಯಂತಿ: ಇಲ್ಲಿದೆ ನೇತಾಜಿಯವರ ಕುರಿತು ಒಂದಿಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಭಾಷ್ ಚಂದ್ರ ಬೋಸ್ ಜಯಂತಿ: ಇಲ್ಲಿದೆ ನೇತಾಜಿಯವರ ಕುರಿತು ಒಂದಿಷ್ಟು ಮಾಹಿತಿ

 

ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಂಡಿಯಾ ಗೇಟ್‌ನಲ್ಲಿ ನೇತಾಜಿ ಅವರ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ಇದರೊಂದಿಗೆ, ಭಾರತವು ಮೊದಲ ಬಾರಿಗೆ ಜನವರಿ 24 ರ ಬದಲಿಗೆ ಜನವರಿ 23 ರಿಂದ ಗಣರಾಜ್ಯೋತ್ಸವವನ್ನು ಪ್ರಾರಂಭಿಸಲಿದೆ. ರಾಜಕೀಯ ನಾಯಕರು ಸೇರಿದಂತೆ ಇಡೀ ದೇಶ, ನೇತಾಜಿ ಅವರ ಶೌರ್ಯ ಮತ್ತು ಭಾರತಕ್ಕಾಗಿ ಹೋರಾಡಿದ ಈ ಮಹಾನ್ ಶಕ್ತಿಯನ್ನ ಸ್ಮರಿಸುತ್ತಿದ್ದಾರೆ‌. ಅವರ ಜೀವನದ ಅತ್ಯಂತ ಪ್ರಮುಖ ಘಟ್ಟಗಳನ್ನ ಅರಿಯುವ ಮೂಲಕ ನಾವು ನೇತಾಜಿಯವರನ್ನ ಸ್ಮರಿಸೋಣ.

1. ಸುಭಾಷ್ ಚಂದ್ರ ಬೋಸ್ ಜನವರಿ 23, 1897 ರಂದು ಒಡಿಶಾದ ಕಟಕ್‌ನಲ್ಲಿ ಜನಿಸಿದರು. ಪ್ರಸಿದ್ಧ ವಕೀಲರಾದ ಜಾನಕಿ ನಾಥ್ ಬೋಸ್ ಮತ್ತು ಪ್ರಭಾವತಿ ದೇವಿ ಅವರು ನೇತಾಜಿಯವರ ಜನ್ಮದಾತರು.

2. ಭಾರತದಿಂದ ಬ್ರಿಟಿಷರನ್ನು ಓಡಿಸಲು ಪಣತೊಟ್ಟಿದ್ದ ನೇತಾಜಿ ಅವರು ಅಕ್ಟೋಬರ್ 21, 1943 ರಂದು ಭಾರತೀಯ ರಾಷ್ಟ್ರೀಯ ಸೇನೆಯನ್ನು (ಆಜಾದ್ ಹಿಂದ್ ಫೌಜ್) ಪುನರುಜ್ಜೀವನಗೊಳಿಸಿದರು. ಇದನ್ನು ಮೊದಲು 1942 ರಲ್ಲಿ ಮೋಹನ್ ಸಿಂಗ್ ಸ್ಥಾಪಿಸಿದ್ದರು.

3. ನೇತಾಜಿಯವರು, ಕೋಲ್ಕತ್ತಾದ ಸ್ಕಾಟಿಷ್ ಚರ್ಚಸ್ ಕಾಲೇಜಿನಿಂದ ತತ್ವಶಾಸ್ತ್ರದಲ್ಲಿ ಪ್ರಥಮ ದರ್ಜೆಯೊಂದಿಗೆ ಪದವಿ ಪಡೆದರು. ಬೋಸ್ ಅವರು ಸ್ವಾಮಿ ವಿವೇಕಾನಂದರ ಬೋಧನೆಗಳಿಂದ ಹೆಚ್ಚು ಪ್ರೇರಿತರಾಗಿದ್ದರು.

4. ಭಾರತೀಯ ನಾಗರಿಕ ಸೇವೆಗಳಿಗೆ ಸ್ಪರ್ಧಿಸಲು 1919 ರಲ್ಲಿ ಇಂಗ್ಲೆಂಡ್‌ಗೆ ಹೋದ ಸುಭಾಸ್ ಚಂದ್ರ ಬೋಸ್, ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದಿಂದ ಆಕ್ರೋಶಿತರಾಗಿ, ತಮ್ಮ ಸಿವಿಲ್ ಸರ್ವೀಸ್ ಅಪ್ರೆಂಟಿಸ್‌ಶಿಪ್ ಅನ್ನು ಮಧ್ಯದಲ್ಲಿ ಬಿಟ್ಟು 1921 ರಲ್ಲಿ ಭಾರತಕ್ಕೆ ಮರಳಿದರು.

5. ಹಿಂದಿರುಗಿದ ನಂತರ, ಬೋಸ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಗೆ ಸೇರಿದರು.

6. ಹಲವಾರು ವಿಷಯಗಳಲ್ಲಿ ಗಾಂಧಿಜಿಯವರೊಂದಿಗೆ ಮನಸ್ತಾಪಗೊಂಡ ನಂತರ ಗೃಹ ಬಂಧನದಲ್ಲಿದ್ದ ಬೋಸ್ ಜನವರಿ 1941 ರಲ್ಲಿ ಕೋಲ್ಕತ್ತಾದ ನಿವಾಸದಿಂದ ಮಾರುವೇಷದಲ್ಲಿ ತಪ್ಪಿಸಿಕೊಂಡು ಅದೇ ವರ್ಷ ಏಪ್ರಿಲ್‌ನಲ್ಲಿ ಜರ್ಮನಿಯನ್ನು ತಲುಪಿದರು.

7. ಜುಲೈ 1943 ರಲ್ಲಿ, ಅವರು ಜರ್ಮನಿಯಿಂದ ಸಿಂಗಾಪುರಕ್ಕೆ ಆಗಮಿಸಿದರು. ಅಲ್ಲಿ ಅವರು ರಾಶ್ ಬಿಹಾರಿ ಬೋಸ್ ಅವರಿಂದ ಪೂರ್ವ ಏಷ್ಯಾದಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯ ಆಡಳಿತವನ್ನು ವಹಿಸಿಕೊಂಡರು. ಭಾರತೀಯ ಯುದ್ಧ ಕೈದಿಗಳನ್ನೊಳಗೊಂಡ, ಆಜಾದ್ ಹಿಂದ್ ಫೌಜ್ ಅನ್ನು ಕಟ್ಟಿದರು. ಇಡೀ ಸೈನ್ಯ ಅವ್ರನ್ನ ʼನೇತಾಜಿ‌ʼ ಎಂದು ಶ್ಲಾಘಿಸಿತು.

8. ಸುಭಾಸ್ ಚಂದ್ರ ಬೋಸ್ ಅವರು ಆಗಸ್ಟ್ 18, 1945 ರಂದು ವಿಮಾನ ಅಪಘಾತದಲ್ಲಿ ತೈವಾನ್‌ ನಲ್ಲಿ ನಿಧನರಾದರು ಎಂದು ನಂಬಲಾಗಿದೆ. ಆನಂತರವು ಅವರು ಬದುಕಿದ್ದರೆಂದು ಹಲವರು ಪ್ರತಿಪಾದಿಸುತ್ತಾರೆ, ಅವರ ಸಾವು ಇಲ್ಲಿಯವರೆಗೂ ನಿಗೂಢವಾಗಿದೆ‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...