
ಪ್ರಧಾನಿಗಳ ವೆಬ್ಸೈಟ್ನಲ್ಲಿ ಪ್ರಧಾನಿ ಮೋದಿಯವರ ನಿವ್ವಳ ಆಸ್ತಿ ಮೌಲ್ಯವು 2.85 ಕೋಟಿ ರೂಪಾಯಿಯಿಂದ 3,07,68,885 ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಮೌಲ್ಯವು 22 ಲಕ್ಷ ರೂಪಾಯಿಗಳಿಗೆ ಏರಿಕೆ ಕಂಡಿದೆ.
ವೆಬ್ಸೈಟ್ನಲ್ಲಿರುವ ಮಾಹಿತಿಯ ಪ್ರಕಾರ ಮಾರ್ಚ್ 31ರ ವೇಳೆಗೆ ಪ್ರಧಾನಿ ಮೋದಿಯವರ ಬ್ಯಾಂಕ್ ಖಾತೆಯಲ್ಲಿ 1.5 ಲಕ್ಷ ರೂಪಾಯಿ ಹಣವಿದೆ ಹಾಗೂ 36 ಸಾವಿರ ರೂಪಾಯಿ ನಗದು ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗಾಂಧಿನಗರ ಶಾಖೆಯಲ್ಲಿರುವ ಎಫ್ಡಿಯಿಂದಾಗಿ ಪ್ರಧಾನಿಯವರ ಆಸ್ತಿ ಮೌಲ್ಯ ಹೆಚ್ಚಳವಾಗಿದೆ ಎನ್ನಲಾಗಿದೆ. ಗಾಂಧಿ ನಗರದ ಶಾಖೆಯಲ್ಲಿರುವ ಎಫ್ಡಿ ಮೌಲ್ಯ 1.86 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷ 1.6 ಕೋಟಿ ರೂಪಾಯಿ ಸ್ಥಿರ ಠೇವಣಿಯನ್ನು ಮೋದಿ ಹೊಂದಿದ್ದರು.
ಪ್ರಧಾನಿ ಮೋದಿ ಷೇರು ಮಾರುಕಟ್ಟೆಯಲ್ಲಿ ಹಾಗೂ ಮ್ಯೂಚುವಲ್ ಫಂಡ್ನಲ್ಲಿ ಯಾವುದೇ ಹೂಡಿಕೆಗಳನ್ನು ಮಾಡಿಲ್ಲ. ಇದರ ಹೊರತಾಗಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (8,93,251 ರೂ.), ಜೀವ ವಿಮಾ ಪಾಲಿಸಿಗಳು (1,50,957 ರೂ.)ಹಾಗೂ ಎಲ್& ಟಿ ಮೂಲಸೌಕರ್ಯ ಬಾಂಡ್ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದನ್ನು ಇವರು 20 ಸಾವಿರ ರೂಪಾಯಿಗಳಿಗೆ 2012ರಲ್ಲಿ ಖರೀದಿ ಮಾಡಿದ್ದರು.
ಚಿನ್ನದ ಮೇಲಿನ ಹೂಡಿಕೆ :
ಪ್ರಧಾನಿ ಮೋದಿಯವರ ಬಳಿ ಒಟ್ಟು 1.48 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ.
ಪ್ರಧಾನಿ ಮೋದಿ ಬಳಿ ಯಾವುದೇ ವಾಹನ ಅಥವಾ ಸಾಲ ಇಲ್ಲ.
ವೆಬ್ಸೈಟ್ನಲ್ಲಿರುವ ಮಾಹಿತಿಯ ಪ್ರಕಾರ ಪ್ರಧಾನಿ ಮೋದಿ ಯಾವುದೇ ವೈಯಕ್ತಿಕ ಸಾಲಗಳನ್ನು ಪಡೆದಿಲ್ಲ. ಪ್ರಧಾನಿ ಮೋದಿಯವರ ಹೆಸರಿನಲ್ಲಿ ಯಾವುದೇ ವೈಯಕ್ತಿಕ ವಾಹನಗಳು ಇಲ್ಲ.


