alex Certify ಇಲ್ಲಿದೆ ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿ ವಿವರ

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿ ಮೌಲ್ಯದಲ್ಲಿ ಕೊಂಚ ಏರಿಕೆ ಕಂಡುಬಂದಿದೆ.

ಪ್ರಧಾನಿಗಳ ವೆಬ್​ಸೈಟ್​​ನಲ್ಲಿ ಪ್ರಧಾನಿ ಮೋದಿಯವರ ನಿವ್ವಳ ಆಸ್ತಿ ಮೌಲ್ಯವು 2.85 ಕೋಟಿ ರೂಪಾಯಿಯಿಂದ 3,07,68,885 ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಮೌಲ್ಯವು 22 ಲಕ್ಷ ರೂಪಾಯಿಗಳಿಗೆ ಏರಿಕೆ ಕಂಡಿದೆ.

ವೆಬ್​ಸೈಟ್​ನಲ್ಲಿರುವ ಮಾಹಿತಿಯ ಪ್ರಕಾರ ಮಾರ್ಚ್​ 31ರ ವೇಳೆಗೆ ಪ್ರಧಾನಿ ಮೋದಿಯವರ ಬ್ಯಾಂಕ್​ ಖಾತೆಯಲ್ಲಿ 1.5 ಲಕ್ಷ ರೂಪಾಯಿ ಹಣವಿದೆ ಹಾಗೂ 36 ಸಾವಿರ ರೂಪಾಯಿ ನಗದು ಇದೆ. ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಗಾಂಧಿನಗರ ಶಾಖೆಯಲ್ಲಿರುವ ಎಫ್​​ಡಿಯಿಂದಾಗಿ ಪ್ರಧಾನಿಯವರ ಆಸ್ತಿ ಮೌಲ್ಯ ಹೆಚ್ಚಳವಾಗಿದೆ ಎನ್ನಲಾಗಿದೆ. ಗಾಂಧಿ ನಗರದ ಶಾಖೆಯಲ್ಲಿರುವ ಎಫ್​ಡಿ ಮೌಲ್ಯ 1.86 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷ 1.6 ಕೋಟಿ ರೂಪಾಯಿ ಸ್ಥಿರ ಠೇವಣಿಯನ್ನು ಮೋದಿ ಹೊಂದಿದ್ದರು.

ಪ್ರಧಾನಿ ಮೋದಿ ಷೇರು ಮಾರುಕಟ್ಟೆಯಲ್ಲಿ ಹಾಗೂ ಮ್ಯೂಚುವಲ್​ ಫಂಡ್​​ನಲ್ಲಿ ಯಾವುದೇ ಹೂಡಿಕೆಗಳನ್ನು ಮಾಡಿಲ್ಲ. ಇದರ ಹೊರತಾಗಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (8,93,251 ರೂ.), ಜೀವ ವಿಮಾ ಪಾಲಿಸಿಗಳು (1,50,957 ರೂ.)ಹಾಗೂ ಎಲ್​& ಟಿ ಮೂಲಸೌಕರ್ಯ ಬಾಂಡ್​ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದನ್ನು ಇವರು 20 ಸಾವಿರ ರೂಪಾಯಿಗಳಿಗೆ 2012ರಲ್ಲಿ ಖರೀದಿ ಮಾಡಿದ್ದರು.

ಚಿನ್ನದ ಮೇಲಿನ ಹೂಡಿಕೆ :

ಪ್ರಧಾನಿ ಮೋದಿಯವರ ಬಳಿ ಒಟ್ಟು 1.48 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ.

ಪ್ರಧಾನಿ ಮೋದಿ ಬಳಿ ಯಾವುದೇ ವಾಹನ ಅಥವಾ ಸಾಲ ಇಲ್ಲ.

ವೆಬ್​ಸೈಟ್​ನಲ್ಲಿರುವ ಮಾಹಿತಿಯ ಪ್ರಕಾರ ಪ್ರಧಾನಿ ಮೋದಿ ಯಾವುದೇ ವೈಯಕ್ತಿಕ ಸಾಲಗಳನ್ನು ಪಡೆದಿಲ್ಲ. ಪ್ರಧಾನಿ ಮೋದಿಯವರ ಹೆಸರಿನಲ್ಲಿ ಯಾವುದೇ ವೈಯಕ್ತಿಕ ವಾಹನಗಳು ಇಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...