alex Certify ಕೇದಾರನಾಥದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ; ಆದಿಗುರು ಶಂಕರಾಚಾರ್ಯರ ಪುತ್ಥಳಿ ಅನಾವರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇದಾರನಾಥದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ; ಆದಿಗುರು ಶಂಕರಾಚಾರ್ಯರ ಪುತ್ಥಳಿ ಅನಾವರಣ

ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ್​ ತಲುಪಿದ್ದು ಕೇದಾರನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಯಲ್ಲಿ 35 ಟನ್​​ ತೂಕದ ಆದಿಗುರು ಶಂಕರಾಚಾರ್ಯರ 12 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ್ರು. ಆದಿಗುರು ಶಂಕರಾಚಾರ್ಯರ ಪ್ರತಿಮೆ ನಿರ್ಮಾಣ ಕೆಲಸವು 2019ರಿಂದಲೇ ಆರಂಭವಾಗಿತ್ತು. ಪ್ರಧಾನಿಯಾದ ಬಳಿಕ ಕೇದಾರನಾಥ್​​ಗೆ ಐದನೇ ಬಾರಿಗೆ ಭೇಟಿ ನೀಡಿದಂತಾಗಿದೆ.

ಮುಂಜಾನೆಯೇ ಡೆಹ್ರಾಡೂನ್​ ತಲುಪಿದ ಪ್ರಧಾನಿ ಮೋದಿಯನ್ನು ಉತ್ತರಾಖಂಡ್​ ರಾಜ್ಯಪಾಲ ಗುರುಮಿತ್​ ಸಿಂಗ್​​ ಹಾಗೂ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಮಿ ಸ್ವಾಗತಿಸಿದರು.

ಇಂದು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ, ಈ ಪೈಕಿ ಗಂಗಾನದಿಯ ಉಪನದಿಯಾದ ಮಂದಾಕಿನಿಯಲ್ಲಿ 2013ರ ಜಲಪ್ರಳಯದಲ್ಲಿ ಹಾನಿಗೊಳಗಾಗಿದ್ದ ಶಂಕರಾಚಾರ್ಯರ ಸಮಾಧಿಯನ್ನು ಪುನರ್​ ನಿರ್ಮಾಣ ಮಾಡಲಾಗಿದ್ದು ಈ ಸಮಾಧಿಯನ್ನೂ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. 8ನೇ ಶತಮಾನದ ದಾರ್ಶನಿಕರಾಗಿದ್ದ ಆದಿ ಗುರು ಶಂಕರಾಚಾರ್ಯರು ಕೇದಾರನಾಥದಲ್ಲಿ ಮೋಕ್ಷವನ್ನು ಪಡೆದಿದ್ದರು.

ಇನ್ನು ಇದರ ಜೊತೆಯಲ್ಲಿ ಕೇದಾಪುರಿ ಮರು ನಿರ್ಣಾಮ ಯೋಜನೆ ಸೇರಿದಂತೆ ಇನ್ನಿತರ ಅನೇಕ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಗಳು 12 ಜ್ಯೋರ್ತಿಲಿಂಗಗಳು, 4 ಶಂಕರಾಚಾರ್ಯ ಮಠಗಳು ಹಾಗೂ ದೇಶದ ಇತರೆ ದೇವಾಲಯಗಳಲ್ಲಿ ನೇರಪ್ರಸಾರ ಕಾಣಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...