alex Certify ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗುಜರಾತಿನ ನವ್ಸರಿಯ ವಡ್ನಾಗರ್ ನಲ್ಲಿ ತಮ್ಮ ಶಾಲಾ ಗುರುವನ್ನು ಭೇಟಿ ಮಾಡಿ ಉಭಯಕುಶಲೋಪರಿ ನಡೆಸಿದರು.
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿಮಿತ್ತ ಒಂದು ದಿನದ ಭೇಟಿಗಾಗಿ ಗುಜರಾತಿಗೆ ಭೇಟಿ ನೀಡಿದ್ದ ಮೋದಿ ಬಿಡುವು ಮಾಡಿಕೊಂಡು ತಮ್ಮ ಪ್ರಾಥಮಿಕ ಶಾಲೆಯ ಗುರುವನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರಲ್ಲದೇ, ಅವರಿಂದ ಆಶೀರ್ವಾದ ಪಡೆದಿದ್ದಾರೆ.

ಪ್ರಧಾನಿ ಮೋದಿಯವರು ತಮ್ಮ ಕೈಗಳನ್ನು ಜೋಡಿಸಿ ಗುರುಗಳಿಗೆ ನಮಸ್ಕರಿಸುತ್ತಿರುವುದು ಮತ್ತು ಮೋದಿಗೆ ಗುರುಗಳು ತಲೆಯನ್ನು ನೇವರಿಸುತ್ತಾ ಆಶೀರ್ವದಿಸುತ್ತಿರುವ ಚಿತ್ರ ಇದಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ನಮ್ಮಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಯೊಬ್ಬ ದೇಶದ ಪ್ರಧಾನಿಯಾಗಿದ್ದಾರೆ ಎಂಬುದು ನಮಗೆ ಸಂತೋಷ ತಂದಿದೆ. ಇಷ್ಟೇ ಅಲ್ಲ, ಅವರು ಖುದ್ದಾಗಿ ಬಂದು ನಮ್ಮೊಂದಿಗೆ ಕೆಲ ಕಾಲ ಕಳೆದದ್ದು ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು ರಾಜೇಶ್ ನಾಯಕ್ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...