alex Certify ಅಮೃತ್‌ 2.0 ಯೋಜನೆ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಅದರ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೃತ್‌ 2.0 ಯೋಜನೆ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಅದರ ಮಾಹಿತಿ

ನಗರ ಪ್ರದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದ ಎರಡನೇ ಹಂತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದೇ ವೇಳೆ ಅಟಲ್ ನಗರ ಪುನರುಜ್ಜೀವನ ಹಾಗೂ ಪರಿವರ್ತನೆ ಅಭಿಯಾನ (ಅಮೃತ್‌) 2.0ಗೆ ಮೋದಿ ಮುನ್ನುಡಿ ನೀಡಿದ್ದು, ನಗರಗಳನ್ನು ತ್ಯಾಜ್ಯ ಮುಕ್ತ ಹಾಗೂ ಜಲ ಭದ್ರವನ್ನಾಗಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಈ ಅಭಿಯಾನಗಳ ಹೊಸ ಹಂತಗಳು ಡಾ. ಬಿ.ಆರ್‌. ಅಂಬೇಡ್ಕರ್‌ರ ಕನಸುಗಳನ್ನು ಸಾಕಾರಗೊಳಿಸಲು ಪ್ರಮುಖ ಹೆಜ್ಜೆಗಳಾಗಿವೆ ಎಂದ ಮೋದಿ, “ಇಂದಿನ ಕಾರ್ಯಕ್ರಮವನ್ನು ಬಿ.ಆರ್‌. ಅಂಬೇಡ್ಕರ್‌ ಕೇಂದ್ರದಲ್ಲಿ ಆಯೋಜಿಸುತ್ತಿರುವುದು ನಮ್ಮ ಭಾಗ್ಯ. ಅಸಮಾನತೆ ತೊಡಗಿಸಲು ನಗರಾಭಿವೃದ್ಧಿ ಬಹಳ ಮಹತ್ವ ಪಡೆದಿದೆ ಎಂದು ಬಾಬಾ ಸಾಹೇಬರು ನಂಬಿದ್ದರು,” ಎಂದಿದ್ದಾರೆ.

BIG NEWS: ಗರೀಬ್ ಕಲ್ಯಾಣ್ ಯೋಜನೆಯಡಿ ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಣೆ, ಆರೋಪ

ಸ್ವಚ್ಛ ಭಾರತ್‌ ಅಭಿಯಾನ (ನಗರ) 2.0 ಮೂಲಕ ಅಮೃತ್‌ ವ್ಯಾಪ್ತಿಯೊಳಗೆ ಬಾರದ ನಗರಗಳ ಕಂದು ಹಾಗೂ ಕಪ್ಪು ಬಣ್ಣದ ನೀರಿನ ನಿರ್ವಹಣೆ ಮೂಲಕ ತ್ಯಾಜ್ಯಮುಕ್ತ ಮಾಡುವ ಕನಸು ಹೊಂದಲಾಗಿದೆ. ಎಲ್ಲಾ ನಗರಗಳನ್ನು ಬಹಿರ್ದೆಸೆ ಮುಕ್ತವನ್ನಾಗಿ ಮಾಡುವ ಮೂಲಕ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯಾಭ್ಯಾಸಗಳಿಗೆ ಪ್ರೇರಣೆ ನೀಡುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ.

ಮಿತ ಬಳಕೆ ಹಾಗೂ ಮರುಬಳಕೆಗಳ ಜೊತೆಗೆ ವೈಜ್ಞಾನಿಕ ಸಂಸ್ಕರಣೆಗೆ ಒತ್ತು ನೀಡುವುದರೊಂದಿಗೆ ಪಾಲಿಕೆಗಳ ತ್ಯಾಜ್ಯ ಸುರಿಯುವ ಜಾಗಗಳ ಪುನಶ್ಚೇತನದ ಗುರಿಯನ್ನೂ ಅಭಿಯಾನದಡಿ ಹೊಂದಲಾಗಿದೆ.

BREAKING: ರೈತರು ವಿರೋಧಿಸುತ್ತಿರುವ ಕಾಯ್ದೆ ಹಿಂಪಡೆಯಲು ಮೋದಿಗೆ ನೂತನ ಸಿಎಂ ಚರಣ್ ಜಿತ್ ಸಿಂಗ್ ಆಗ್ರಹ

ದೇಶದ 4,700 ಪೌರಾಡಳಿತ ಪ್ರದೇಶಗಳ ವ್ಯಪ್ತಿಯಲ್ಲಿರುವ ಪ್ರತಿಯೊಂದು ಮನೆಗೂ ನೀರಿನ ಪೂರೈಕೆ ವ್ಯವಸ್ಥೆ ಮಾಡಲು 2.68 ಕೋಟಿಯಷ್ಟು ನಲ್ಲಿ ಸಂಪರ್ಕ ಹಾಗೂ ಅಮೃತ್‌ ಯೋಜನೆಯಡಿ ಬರುವ 500 ನಗರಗಳಲ್ಲಿ ಕೊಳಚೆ ಹಾಗೂ ಸೆಪ್ಟೇಜ್ ಸಂಪರ್ಕಗಳನ್ನು ನೀಡುವ ಮೂಲಕ 10.5 ಕೋಟಿ ಜನರಿಗೆ ಪ್ರಯೋಜನವಾಗುವ ಕಾರ್ಯಕ್ರಮಗಳನ್ನು ಅಮೃತ್‌ 2.0 ಹೊಂದಿದೆ.

ಜಲ ಮೂಲಗಳ ಸಂರಕ್ಷಣೆ ಹಾಗೂ ಪುನರುತ್ಥಾನಕ್ಕೆ ಉತ್ತೇಜನ ನೀಡುವುದೂ ಸಹ ಅಮೃತ್‌ 2.0ನ ಉದ್ದೇಶಗಳಲ್ಲಿ ಒಂದಾಗಿದೆ. ಅಮೃತ್‌ 2.0 ಅಭಿಯಾನಕ್ಕೆ 2.87 ಲಕ್ಷ ಕೋಟಿ ರೂಪಾಯಿಗಳು ಖರ್ಚಾಗಲಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...