alex Certify ಭರೂಚ್ ನ ʼಉತ್ಕರ್ಷ್ʼ ಸಮಾರೋಪದಲ್ಲಿ ಬಾಲಕಿಯ ಮನದಾಸೆ ಕೇಳಿ ಭಾವುಕರಾದ ಪ್ರಧಾನಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರೂಚ್ ನ ʼಉತ್ಕರ್ಷ್ʼ ಸಮಾರೋಪದಲ್ಲಿ ಬಾಲಕಿಯ ಮನದಾಸೆ ಕೇಳಿ ಭಾವುಕರಾದ ಪ್ರಧಾನಿ ಮೋದಿ

ಭರೂಚ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುಜರಾತಿನ ಭರೂಚ್ ನಲ್ಲಿ ಉತ್ಕರ್ಷ್ ಸಮಾರೋಹ್ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದು ಭಾಗವಹಿಸಿದ್ದ ಜನರೊಂದಿಗೆ ಸಂವಾದ ನಡೆಸಿದ್ದಾರೆ.

ಈ ಜಿಲ್ಲೆಯಲ್ಲಿ ಅಗತ್ಯವಿರುವವರಿಗೆ ಸಕಾಲಿಕ ಆರ್ಥಿಕ ನೆರವು ನೀಡಲು ಸಹಾಯ ಮಾಡುವ ರಾಜ್ಯ ಸರ್ಕಾರದ ನಾಲ್ಕು ಪ್ರಮುಖ ಯೋಜನೆಗಳು ಶೇ.100ರಷ್ಟು ಯಶಸ್ಸು ಸಾಧಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ಮೊದಲು ‘ಉತ್ಕರ್ಷ್ ಇನಿಶಿಯೇಟಿವ್’ ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಿ ಈ ಯೋಜನೆಗಳು ವ್ಯಕ್ತಿಯ ಬದುಕನ್ನು ಸುಂದರವಾಗಿ ರೂಪಿಸಲು ನೆರವಾಗುತ್ತದೆ ಎಂದು ವಿವರಿಸಿದರು.
ಬಳಿಕ ದೃಷ್ಟಿದೋಷವುಳ್ಳ ವ್ಯಕ್ತಿಯ ಜೊತೆ ಸಂವಾದ ನಡೆಸುವ ವೇಳೆ ನರೇಂದ್ರ ಮೋದಿ ಭಾವುಕರಾಗಿದ್ದು, ಈ ಸಂಬಂಧದ ಎಎನ್ ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.

BIG NEWS: ಮಕ್ಕಳಲ್ಲಿ ಟೊಮೆಟೊ ಜ್ವರ ಭೀತಿ; ಎಚ್ಚರ ವಹಿಸುವಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಸೂಚನೆ

ಆಯೂಬ್ ಪಟೇಲ್ ಗುಜರಾತ್‌ನಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳಲ್ಲಿ ಒಬ್ಬರು. ಇವರು ಈ ಕಾರ್ಯಕ್ರಮಕ್ಕೆ ತಮ್ಮ ಮಗಳ ಜೊತೆಗೆ ಆಗಮಿಸಿದ್ದರು. ಆಯೂಬ್ ಅವರು ಮೋದಿ ಅವರ ಜೊತೆ ಮಾತನಾಡುತ್ತಾ, ತನ್ನ ಮಗಳು ವೈದ್ಯರಾಗಬೇಕೆಂಬ ಕನಸು ಕಂಡಿದ್ದಾಳೆ ಎಂದು ವಿವರಿಸಿದರು. ಆಗ ಭಾವುಕರಾದ ಮೋದಿ ಕೊಂಚ ಸಮಾಧಾನ ಮಾಡಿಕೊಂಡು ಅವರೊಟ್ಟಿಗೆ ಸಂವಾದ ಮುಂದುವರೆಸಿ ನಿಮ್ಮ ಮಕ್ಕಳ ಕನಸು ಈಡೇರಿಸಲು ಸಹಾಯ ಬೇಕಾದರೆ ಕೇಳಿ ಎಂದು ಹೇಳಿದರು ಎಂಬ ವಿಡಿಯೋವನ್ನು ರಾಜ್ಯದ ಮಾಹಿತಿ ನಿರ್ದೇಶನಾಲಯ ಟ್ವೀಟ್ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...