alex Certify ‘ಪ್ರಧಾನಿ ಮೋದಿ ಭಾರತದ ಆಭರಣ’ : ಬ್ರಿಟನ್ ನಲ್ಲಿ ‘ನಮೋ’ಗೆ ಘೋಷಣೆ ಮೂಲಕ ಸ್ವಾಗತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪ್ರಧಾನಿ ಮೋದಿ ಭಾರತದ ಆಭರಣ’ : ಬ್ರಿಟನ್ ನಲ್ಲಿ ‘ನಮೋ’ಗೆ ಘೋಷಣೆ ಮೂಲಕ ಸ್ವಾಗತ

ಭಾನುವಾರ ಗ್ಲಾಸ್ಗೋಗೆ ಪ್ರಧಾನಿ ಮೋದಿ ಬಂದಿಳಿಯುತ್ತಿದ್ದಂತೆಯೇ ಮೋದಿ ಭಾರತದ ಆಭರಣ ಎಂಬ ಘೋಷವಾಕ್ಯವು ಕೇಳಿ ಬಂದಿದೆ. COP26 ಹವಾಮಾನ ಶೃಂಗಸಭೆಯಲ್ಲಿ ಭಾಗಿಯಾಗುವ ನಿಮಿತ್ತ ಪ್ರಧಾನಿ ಮೋದಿ ಬ್ರಿಟನ್​​ಗೆ 2 ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಈ ಪ್ರವಾಸದಲ್ಲಿ ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್​ ಜೊತೆಯಲ್ಲಿ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ.

ಇಟಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭಾಗಿಯಾದ ಬಳಿಕ ಪ್ರಧಾನಿ ಮೋದಿ ಗ್ಲಾಸ್​ಗೋ ಹೋಟೆಲ್​ಗೆ ಬಂದಿಳಿದಿದ್ದರು. ಹೋಟೆಲ್​ಗೆ ಬಂದಿಳಿದ ಪ್ರಧಾನಿ ಮೋದಿಗೆ ಸ್ಕಾಟಿಷ್​ನಿಂದ ಅಭೂತಪೂರ್ವ ಸ್ವಾಗತ ದೊರಕಿತು. ಬಳಿಕ ಭಾರತೀಯ ವಲಸಿಗ ಪ್ರತಿನಿಧಿಗಳು ಭಾರತ್​ ಮಾತಾ ಕಿ ಜೈ ಎಂಬ ಘೋಷಣೆಯನ್ನು ಕೂಗಿದರು.

ಹೋಟೆಲ್​​ನಲ್ಲಿದ್ದ ಭಾರತೀಯ ವಲಸಿಗ ಸಮುದಾಯದ ಪೈಕಿ ಇದ್ದ ಪುಟ್ಟ ಮಗುವಿನ ಜೊತೆ ಪ್ರಧಾನಿ ಮೋದಿ ಕೆಲ ಕಾಲ ಮಾತುಕತೆ ನಡೆಸಿದ್ದು ಕಂಡುಬಂತು.

ವಿಶ್ವಸಂಸ್ಥೆಯ 26ನೇ ಕ್ಲೈಮೇಟ್​​ ಚೇಂಜ್​ ಶೃಂಗಸಭೆಯ ನೇತೃತ್ವವನ್ನು ಇಟಲಿ ಸಹಭಾಗಿತ್ವದಲ್ಲಿ ಬ್ರಿಟನ್​ ಹೊತ್ತುಕೊಂಡಿದೆ. ಅಕ್ಟೋಬರ್​ 31ರಿಂದಲೇ ಆರಂಭವಾಗಿರುವ ಈ ಶೃಂಗಸಭೆಯು ನವೆಂಬರ್​ 12ರಂದು ಕೊನೆಗಾಣಲಿದೆ.

ಪ್ರಧಾನಿ ಮೋದಿ ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್​ ಜೊತೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವೇಳೆ ಅವರು ಭಾರತ – ಬ್ರಿಟನ್​ ಸಂಬಂಧದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

— ANI (@ANI) October 31, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...