‘ಪ್ರಧಾನಿ ಮೋದಿ ಭಾರತದ ಆಭರಣ’ : ಬ್ರಿಟನ್ ನಲ್ಲಿ ‘ನಮೋ’ಗೆ ಘೋಷಣೆ ಮೂಲಕ ಸ್ವಾಗತ 01-11-2021 11:13AM IST / No Comments / Posted In: Latest News, Live News, International ಭಾನುವಾರ ಗ್ಲಾಸ್ಗೋಗೆ ಪ್ರಧಾನಿ ಮೋದಿ ಬಂದಿಳಿಯುತ್ತಿದ್ದಂತೆಯೇ ಮೋದಿ ಭಾರತದ ಆಭರಣ ಎಂಬ ಘೋಷವಾಕ್ಯವು ಕೇಳಿ ಬಂದಿದೆ. COP26 ಹವಾಮಾನ ಶೃಂಗಸಭೆಯಲ್ಲಿ ಭಾಗಿಯಾಗುವ ನಿಮಿತ್ತ ಪ್ರಧಾನಿ ಮೋದಿ ಬ್ರಿಟನ್ಗೆ 2 ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜೊತೆಯಲ್ಲಿ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಇಟಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭಾಗಿಯಾದ ಬಳಿಕ ಪ್ರಧಾನಿ ಮೋದಿ ಗ್ಲಾಸ್ಗೋ ಹೋಟೆಲ್ಗೆ ಬಂದಿಳಿದಿದ್ದರು. ಹೋಟೆಲ್ಗೆ ಬಂದಿಳಿದ ಪ್ರಧಾನಿ ಮೋದಿಗೆ ಸ್ಕಾಟಿಷ್ನಿಂದ ಅಭೂತಪೂರ್ವ ಸ್ವಾಗತ ದೊರಕಿತು. ಬಳಿಕ ಭಾರತೀಯ ವಲಸಿಗ ಪ್ರತಿನಿಧಿಗಳು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯನ್ನು ಕೂಗಿದರು. ಹೋಟೆಲ್ನಲ್ಲಿದ್ದ ಭಾರತೀಯ ವಲಸಿಗ ಸಮುದಾಯದ ಪೈಕಿ ಇದ್ದ ಪುಟ್ಟ ಮಗುವಿನ ಜೊತೆ ಪ್ರಧಾನಿ ಮೋದಿ ಕೆಲ ಕಾಲ ಮಾತುಕತೆ ನಡೆಸಿದ್ದು ಕಂಡುಬಂತು. ವಿಶ್ವಸಂಸ್ಥೆಯ 26ನೇ ಕ್ಲೈಮೇಟ್ ಚೇಂಜ್ ಶೃಂಗಸಭೆಯ ನೇತೃತ್ವವನ್ನು ಇಟಲಿ ಸಹಭಾಗಿತ್ವದಲ್ಲಿ ಬ್ರಿಟನ್ ಹೊತ್ತುಕೊಂಡಿದೆ. ಅಕ್ಟೋಬರ್ 31ರಿಂದಲೇ ಆರಂಭವಾಗಿರುವ ಈ ಶೃಂಗಸಭೆಯು ನವೆಂಬರ್ 12ರಂದು ಕೊನೆಗಾಣಲಿದೆ. ಪ್ರಧಾನಿ ಮೋದಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜೊತೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವೇಳೆ ಅವರು ಭಾರತ – ಬ್ರಿಟನ್ ಸಂಬಂಧದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. #WATCH | Glasgow, UK | Indian community sings 'Modi Hai Bharat Ka Gehna' during interaction with Prime Minister Narendra Modi after his arrival at the hotel. pic.twitter.com/Hq2y7bSWEd — ANI (@ANI) October 31, 2021