ನವದೆಹಲಿ: ಕೋವಿಡ್ ಹೆಚ್ಚಾಗಿರುವ 4 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದಾರೆ. ಕೊರೋನಾ ಸ್ಥಿತಿಗತಿ ಕುರಿತಾಗಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಕರ್ನಾಟಕ, ಪಂಜಾಬ್, ಉತ್ತರಾಖಂಡ್, ಬಿಹಾರ ರಾಜ್ಯಗಳ ಸಿಎಂ ಗಳೊಂದಿಗೆ ಮೋದಿ ಮಾತುಕತೆ ನಡೆಸಿದ್ದಾರೆ. ದೂರವಾಣಿ ಕರೆ ಮಾಡಿದ ಪ್ರಧಾನಿ, ರಾಜ್ಯದಲ್ಲಿ ಸ್ಥಿತಿಗತಿಗಳ ಕುರಿತು, ಸೋಂಕಿತರ ಪ್ರಮಾಣ, ನಿಯಂತ್ರಣ, ಲಸಿಕೆ, ಟಫ್ ರೂಲ್ಸ್ ಮೊದಲಾದ ವಿಚಾರಗಳ ಮಾಹಿತಿ ಪಡೆದು ಚರ್ಚೆ ನಡೆಸಿದ್ದಾರೆ. ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಕಳೆದ 2 -3 ದಿನಗಳಿಂದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೋದಿ ಕರೆ ಮಾಡಿ ಮಾತನಾಡಿದ್ದು, ಇದರ ಮುಂದುವರೆದ ಭಾಗವಾಗಿ ಇಂದು ನಾಲ್ವರು ಸಿಎಂಗಳೊಂದಿಗೆ ಚರ್ಚೆ ನಡೆಸಿದ್ದಾರೆ.