alex Certify ಕೊರೋನಾ ನಿಯಂತ್ರಣಕ್ಕೆ ಮೋದಿ ಮತ್ತೊಂದು ಕ್ರಮ: ಸಿಎಂ ಯಡಿಯೂರಪ್ಪ ಸೇರಿ ನಾಲ್ವರು ಮುಖ್ಯಮಂತ್ರಿಗಳಿಗೆ ಕರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ನಿಯಂತ್ರಣಕ್ಕೆ ಮೋದಿ ಮತ್ತೊಂದು ಕ್ರಮ: ಸಿಎಂ ಯಡಿಯೂರಪ್ಪ ಸೇರಿ ನಾಲ್ವರು ಮುಖ್ಯಮಂತ್ರಿಗಳಿಗೆ ಕರೆ

ನವದೆಹಲಿ: ಕೋವಿಡ್ ಹೆಚ್ಚಾಗಿರುವ 4 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದಾರೆ. ಕೊರೋನಾ ಸ್ಥಿತಿಗತಿ ಕುರಿತಾಗಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಕರ್ನಾಟಕ, ಪಂಜಾಬ್, ಉತ್ತರಾಖಂಡ್, ಬಿಹಾರ ರಾಜ್ಯಗಳ ಸಿಎಂ ಗಳೊಂದಿಗೆ ಮೋದಿ ಮಾತುಕತೆ ನಡೆಸಿದ್ದಾರೆ. ದೂರವಾಣಿ ಕರೆ ಮಾಡಿದ ಪ್ರಧಾನಿ, ರಾಜ್ಯದಲ್ಲಿ ಸ್ಥಿತಿಗತಿಗಳ ಕುರಿತು, ಸೋಂಕಿತರ ಪ್ರಮಾಣ, ನಿಯಂತ್ರಣ, ಲಸಿಕೆ, ಟಫ್ ರೂಲ್ಸ್ ಮೊದಲಾದ ವಿಚಾರಗಳ ಮಾಹಿತಿ ಪಡೆದು ಚರ್ಚೆ ನಡೆಸಿದ್ದಾರೆ. ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಕಳೆದ 2 -3 ದಿನಗಳಿಂದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೋದಿ ಕರೆ ಮಾಡಿ ಮಾತನಾಡಿದ್ದು, ಇದರ ಮುಂದುವರೆದ ಭಾಗವಾಗಿ ಇಂದು ನಾಲ್ವರು ಸಿಎಂಗಳೊಂದಿಗೆ ಚರ್ಚೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...