alex Certify BIG BREAKING: ವಾರ ಮೊದಲೇ ಹೋಳಿ ಶುರು; ಬಿಜೆಪಿ ಸಂಭ್ರಮಾಚರಣೆಯಲ್ಲಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ವಾರ ಮೊದಲೇ ಹೋಳಿ ಶುರು; ಬಿಜೆಪಿ ಸಂಭ್ರಮಾಚರಣೆಯಲ್ಲಿ ಮೋದಿ

ನವದೆಹಲಿ: ಇಂದು ಉತ್ಸವದ ದಿನವಾಗಿದೆ. ಬಿಜೆಪಿ ಗೆಲುವಿಗೆ ಕಾರಣರಾದ ಎಲ್ಲ ಮತದಾರರಿಗೆ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭಾರತದ ಪ್ರಜಾಪ್ರಭುತ್ವಕ್ಕೆ ಇದು ಉತ್ಸವ, ಉತ್ಸಾಹದ ದಿನವಾಗಿದೆ. ಪ್ರತಿ ಮತದಾರರಿಗೂ ನಾನು ಶುಭಾಶಯ ಹೇಳುತ್ತೇನೆ. ಮತದಾರರ ನಿರ್ಧಾರಕ್ಕೆ ನಾವು ಅಭಾರಿಯಾಗಿದ್ದೇವೆ. ಮಾತೆಯರು, ಮಹಿಳೆಯರು ಬಿಜೆಪಿ ಬೆಂಬಲಿಸಿದ್ದಾರೆ ಎಂದರು.

ಮತದಾರರು ನೀಡಿದ ಬಹುದೊಡ್ಡ ತೀರ್ಪಿನಿಂದ ಸಂತೋಷವಾಗಿದೆ. ಇದು ಪ್ರಜಾಪ್ರಭುತ್ವದ ಗೆಲುವು ಆಗಿದೆ. ಈ ಬಾರಿ ಹೋಳಿ ವಾರ ಮೊದಲೇ ಆರಂಭವಾಗಲಿದೆ ಎಂದು ಕಾರ್ಯಕರ್ತರು ಹೇಳಿದ್ದರು. ಈ ವಿಜಯ ನೀಡುವ ಮೂಲಕ ಬಿಜೆಪಿ ಕಾರ್ಯಕರ್ತರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ ಎಂದರು.

ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ ಪಕ್ಷದ ಕಾರ್ಯಕರ್ತರು ಗೆಲುವು ತಂದುಕೊಟ್ಟಿದ್ದಾರೆ. ಉತ್ತರಪ್ರದೇಶದಲ್ಲಿ 37 ವರ್ಷದ ನಂತರ ಒಂದೇ ಪಕ್ಷ ಎರಡನೇ ಬಾರಿ ಅಧಿಕಾರಕ್ಕೆ ಬಂದಿದೆ. ಈ ಮೂಲಕ ಇತಿಹಾಸ ಸೃಷ್ಟಿಸಲಾಗಿದೆ. ಗಂಗಾಮಾತೆ, ಕಾಶಿ ವಿಶ್ವನಾಥನ ಆಶೀರ್ವಾದ ನಮಗೆ ಸಿಕ್ಕಿದೆ. ಉತ್ತರಪ್ರದೇಶ, ಗೋವಾ, ಮಣಿಪುರದಲ್ಲಿ ಪಕ್ಷಕ್ಕೆ ಹೆಚ್ಚು ಮತ ಲಭಿಸಿದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...