alex Certify PM Kisan Yojana : 14 ನೇ ಕಂತಿನಲ್ಲಿ 2 ಸಾವಿರದ ಬದಲು 4,000 ರೂ. ಪಡೆಯಲಿದ್ದಾರೆ ಈ ರೈತರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PM Kisan Yojana : 14 ನೇ ಕಂತಿನಲ್ಲಿ 2 ಸಾವಿರದ ಬದಲು 4,000 ರೂ. ಪಡೆಯಲಿದ್ದಾರೆ ಈ ರೈತರು….!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ-ಕಿಸಾನ್ ಯೋಜನೆ) 14ನೇ ಕಂತಿನ ಪಾವತಿಯನ್ನು ಫಲಾನುಭವಿಗಳ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದೆ.

ವರ್ಷದಲ್ಲಿ ಮೂರು ಬಾರಿ 2,000 ರೂ. ಗಳಂತೆ ಒಟ್ಟು 6,000 ರೂ. ಗಳನ್ನು ಈ ಯೋಜನೆಯಡಿ ರೈತರು ತಂತಮ್ಮ ಬ್ಯಾಂಕ್ ಖಾತೆಗಳಿಗೆ ಸ್ವೀಕರಿಸುತ್ತಾರೆ. ಸಾಮಾನ್ಯವಾಗಿ ಪ್ರತಿ ಕಂತಿನಲ್ಲೂ ರೈತರು ತಲಾ 2,000 ರೂ.ಗಳನ್ನು ಸ್ವೀಕರಿಸುತ್ತಾರೆ. ಆದರೆ 13ನೇ ಕಂತಿನ ಪಾವತಿ ವೇಳೆ ತಮ್ಮ ಪಾಲಿನ 2,000 ರೂ.ಗಳನ್ನು ಸ್ವೀಕರಿಸಲು ವಿಫಲರಾದ ರೈತರಿಗೆ ಈ ಬಾರಿ ಒಟ್ಟು 4,000 ರೂ.ಗಳು ಖಾತೆಗೆ ಬಂದು ಬೀಳಲಿದೆ.

ತಂತಮ್ಮ ಗುರುತಿನ ಖಾತ್ರಿ ಮಾಡಲು ವಿಫಲರಾದ ಅನೇಕ ರೈತರಿಗೆ ಕಳೆದ ಕಂತಿನ ಪಾವತಿ ಮಾಡಲಾಗಿಲ್ಲ. ಆದರೆ ಈ ಬಾರಿ ತಮ್ಮ ಗುರುತುಗಳನ್ನು ದೃಢೀಕರಿಸಿದ ರೈತರಿಗೆ ಕಳೆದ ಬಾರಿಯ ಮೊತ್ತವೂ ಸೇರಿ ಒಟ್ಟಾರೆ 4,000 ರೂ.ಗಳು ಖಾತೆಗೆ ಜಮೆಯಾಗಲಿದೆ.

ಪಿಎಂ ಕಿಸಾನ್ ಜಾಲತಾಣದಲ್ಲಿ ಫಲಾನುಭವಿ ರೈತರು ತಂತಮ್ಮ ಹೆಸರುಗಳನ್ನು ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...