alex Certify ರೈತರ ಖಾತೆಗೆ ಹಣ ಜಮಾ: ಪಿಎಂ ಕಿಸಾನ್ ಯೋಜನೆಗೆ ನೋಂದಣಿ, ಇ-ಕೆವೈಸಿ ಮಾಡಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಖಾತೆಗೆ ಹಣ ಜಮಾ: ಪಿಎಂ ಕಿಸಾನ್ ಯೋಜನೆಗೆ ನೋಂದಣಿ, ಇ-ಕೆವೈಸಿ ಮಾಡಿಸಿ

ಕೊಪ್ಪಳ: ಪಿ.ಎಂ.ಕಿಸಾನ್ ಯೋಜನೆಯಡಿ ಲಾಭ ಪಡೆಯದೆ ವಂಚಿತರಿರುವ ಅರ್ಹ ಹೊಸ ಫಲಾನುಭವಿಗಳು ಈ ಯೋಜನೆಯಡಿ ಇ-ಕೆವೈಸಿ ಹಾಗೂ ನೋಂದಣಿ ಮಾಡಿಸಿಕೊಳ್ಳುವಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಪಿ.ಎಂ.ಕಿಸಾನ್ ಯೋಜನೆಯಡಿ ಲಾಭ ಪಡೆಯದೆ ವಂಚಿತರಿರುವ ನೋಂದಣಿಯಾಗದೆ ಬಾಕಿ ಉಳಿದ ಅರ್ಹ ಫಲಾನುಭವಿಗಳ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಜಂಟಿ ಖಾತೆದಾರರು, ಪೌತಿ ಕಾರಣದಿಂದಾಗಿ ಖಾತೆ ವರ್ಗಾವಣೆಯಾಗಿರುವ ಫಲಾನುಭವಿಗಳು, ಒಂದೇ ಕುಟುಂಬದ ಸದಸ್ಯರೆಂದು ಭೂಹಿಡುವಳಿ ಹೊಂದಿರುವ ವಯಸ್ಕ ಮಕ್ಕಳು, ಹಿರಿಯ ನಾಗರೀಕರು ಹಾಗೂ ಮಾಹಿತಿಯ ಕೊರತೆಯಿಂದ ಈ ಎಲ್ಲಾ ಅರ್ಹ ಕಾರಣಗಳಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತ ಕುಟುಂಬಗಳು ಹಾಗೂ ಇತರೆ ಬಾಕಿ ಉಳಿದಿರುವ ಅರ್ಹ ಫಲಾನುಭವಿಗಳ ನೊಂದಣಿ ಮಾಡಿಸಲು ಹಾಗೂ ಇ-ಕೆವೈಸಿ ಮಾಡಿಸುವಂತೆ ರೈತ ಬಾಂಧವರಿಗೆ ಈ ಮೂಲಕ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂದಿಸಿದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪಂರ್ಕಿಸಬಹುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...