ಪ್ರವಾಸಕ್ಕೆಂದು ಬಂದಿದ್ದ 33 ವರ್ಷದ ಟೆಕ್ಕಿಯೊಬ್ಬ ನೀರಿನಲ್ಲಿ ಕಾಲ್ಜಾರಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆಯು ತೆಲಂಗಾಣದ ಮುಲುಗು ಜಿಲ್ಲೆಯ ಕೊಂಗಲಾ ಜಲಪಾತದಲ್ಲಿ ನಡೆದಿದೆ.
ಹೈದರಾಬಾದ್ನಿಂದ ತನ್ನ ಮೂವರು ಸ್ನೇಹಿತರ ಜೊತೆಯಲ್ಲಿ ಟ್ರಿಪ್ಗೆಂದು ಈ ಜಲಪಾತಕ್ಕೆ ಬಂದಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಮಾತನಾಡಿದ ವಾಜೆಡು ಸಬ್ ಇನ್ಸ್ಪೆಕ್ಟರ್ ತಿರುಪತಿ ರಾವ್, 33 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಪಿ.ರಾಹುಲ್ ತರ್ನಾಕಾ ನಿವಾಸಿಯಾಗಿದ್ದು ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಹೈದರಾಬಾದ್ನ ಐಟಿ ಕಂಪನಿಯಲ್ಲಿ ರಾಹುಲ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು ಎಂದು ಹೇಳಿದ್ದಾರೆ.
ಹೂಡಿಕೆ ಹಣ ದ್ವಿಗುಣಗೊಳ್ಳುವುದು ಹೇಗೆ….? `72ರ ನಿಯಮ’ದಡಿ ಲೆಕ್ಕ ಮಾಡಿ
ಬೆಳಗ್ಗೆ 6 ಗಂಟೆ ಸುಮಾರಿಗೆ ಜಲಪಾತ ತಲುಪಿದ್ದ ನಾಲ್ವರು ಸ್ನೇಹಿತರು ನೀರಿಗೆ ಇಳಿದಿದ್ದರು. ಇದರಲ್ಲಿ ರಾಹುಲ್ ಆಯತಪ್ಪಿ ದುರಂತ ಅಂತ್ಯ ಕಂಡಿದ್ದಾರೆ. ಇನ್ನುಳಿದಂತೆ ಮೂವರು ಅಪಾಯದಿಂದ ಪಾರಾಗಿದ್ದಾರೆ. ರಾಹುಲ್ ನೀರು ಪಾಲಾಗುತ್ತಿದ್ದಂತೆಯೇ ಉಳಿದ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಜ್ಞ ಈಜುಗಾರರ ಸಹಾಯದಿಂದ ರಾಹುಲ್ ಮೃತ ದೇಹವನ್ನು ಹೊರ ತೆಗೆಯಲಾಗಿದೆ.