ಚುನಾವಣೆಗಳಲ್ಲಿ ಬಳಕೆಯಾಗುತ್ತಿರುವ ಇವಿಎಂಗಳನ್ನು ಬ್ಯಾನ್ ಮಾಡಿ ಅದರ ಬದಲು ಬ್ಯಾಲೆಟ್ ಪೇಪರ್ಗಳನ್ನೇ ಬಳಕೆಗೆ ತರುವಂತೆ ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಡಿಎನ್ ಪಟೇಲ್ ಹಾಗೂ ಜ್ಯೋತಿ ಸಿಂಗ್ ನೇತೃತ್ವದ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆಯನ್ನ ಆಗಸ್ಟ್ 3ಕ್ಕೆ ಮುಂದೂಡಿದೆ.
ವಕೀಲರಾದ ಸಿಆರ್ ಜಯಾ ಸುಕಿನ್ ಎಂಬವರು ಈ ಅರ್ಜಿ ಸಲ್ಲಿಸಿದ್ದು ಮುಂಬರುವ ದಿನಗಳಲ್ಲಿ ಎದುರಾಗುವ ಚುನಾವಣೆಗಳಲ್ಲಿ ಇವಿಎಂಗಳ ಬದಲಾಗಿ ಬ್ಯಾಲೆಟ್ ಪತ್ರಗಳನ್ನೇ ಬಳಕೆ ಮಾಡುವಂತೆ ಆದೇಶ ನೀಡುವಂತೆ ಕೋರಿದ್ದಾರೆ.
ಪ್ರಜಾಪ್ರಭುತ್ವವನ್ನ ಕಾಪಾಡುವ ಸಲುವಾಗಿ, ಈ ಹಿಂದೆ ಚುನಾವಣೆಗಳಲ್ಲಿ ಬಳಕೆಯಾಗುತ್ತಿದ್ದ ಬ್ಯಾಲೆಟ್ ಪತ್ರಗಳನ್ನೇ ನಾವು ಮತ್ತೆ ತರಬೇಕಿದೆ. ಭಾರತದಲ್ಲಿ ಬ್ಯಾಲೆಟ್ ಪತ್ರಗಳ ಸ್ಥಾನವನ್ನ ಇವಿಎಂಗಳು ಪಡೆದುಕೊಂಡಿವೆ. ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ ಹಾಗೂ ಅಮೆರಿಕದಂತಹ ರಾಷ್ಟ್ರಗಳೇ ಇವಿಎಂ ಬಳಕೆಯನ್ನ ಬ್ಯಾನ್ ಮಾಡಿವೆ ಎಂದು ಅರ್ಜಿದಾರ ವಕೀಲ ಜಯ ಸುಕಿನ್ ಹೇಳಿದ್ದಾರೆ.