alex Certify ತಲೆ ಕೂದಲು ಕಸಿ ಮಾಡಿಸಿಕೊಳ್ಳುತ್ತಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ಕೂದಲು ಕಸಿ ಮಾಡಿಸಿಕೊಳ್ಳುತ್ತಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ

ಕೂದಲು ತೆಳ್ಳಗಾಗಿ ಮುಂಭಾಗದಲ್ಲಿ ಬೇಗನೇ ಉದುರುವುದು. ಗಂಡಸರು ಹರೆಯದಲ್ಲೇ ಬೋಳು ತಲೆ ಹೊಂದುವುದು, ಹೆಂಗಸರಲ್ಲಿ ವಿಪರೀತವಾಗಿ ಕೂದಲು ಉದುರುವಿಕೆಯಂತಹ ಸಮಸ್ಯೆಗಳು ತೀರ ಸಾಮಾನ್ಯವಾಗಿದೆ.

ಇದನ್ನೇ ಬಂಡವಾಳ ಮಾಡಿಕೊಂಡು ತಲೆಕೂದಲು ಎಣ್ಣೆಯ ಹಲವು ಕಂಪನಿಗಳು ಮಾರುಕಟ್ಟೆಯಲ್ಲಿ ಸುಳ್ಳು ಭರವಸೆಗಳನ್ನು ನೀಡುತ್ತಾ ಸುಲಿಗೆಗೆ ಇಳಿದಿವೆ.

ಹಾಗಾಗಿಯೇ ಇವುಗಳಿಂದ ಬೇಸತ್ತವರು, ಸಿನಿಮಾ ತಾರೆಯರು, ಧಾರಾವಾಹಿಯ ನಟ-ನಟಿಯರು ಕೂದಲು ಕಸಿ (ಹೇರ್ ಟ್ರಾನ್ಸ್ ಪ್ಲಾಂಟ್) ಮಾಡಿಸಿಕೊಳ್ಳುತ್ತಿದ್ದಾರೆ.‌

ಈ ಬಗ್ಗೆ ಖ್ಯಾತ ಕಾಸ್ಮೆಟಿಕ್ ಶಸ್ತ್ರಚಿಕಿತ್ಸಕ ಡಾ. ಅಜಯ್ ಕಶ್ಯಪ್ ಹೇಳುವಂತೆ, ಕೂದಲ ಬುಡ ಅಥವಾ ಬೇರುಗಳಿಗೆ ಕೂದಲು ಕಸಿಯನ್ನು ಮಾಡಲಾಗುತ್ತದೆ. ಅಂದರೆ, ದೇಹದ ಬೇರೊಂದು ಭಾಗದಿಂದ ಚರ್ಮದ ಮೇಲಿನ ಕೂದಲು ಅಥವಾ ರೋಮಗಳನ್ನು ತೆಗೆದುಕೊಂಡು ಬೋಳಿರುವ ಜಾಗದಲ್ಲಿ ಅಳವಡಿಸಲಾಗುತ್ತದೆ. ಆಗ ಬೋಳನೇ ಜಾಗದಲ್ಲಿ ಹೊಸ ಚರ್ಮದ ಆಧಾರದ ಮೇಲೆ ಬುಡದಿಂದಲೇ ಕೂದಲು ಬೆಳೆದುಕೊಳ್ಳುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.

ಉದಾತ್ತ ಉದ್ದೇಶಕ್ಕಾಗಿ 13 ವರ್ಷಗಳ ಕಾಲ ಬೆಳೆಸಿದ ಕೂದಲು ದಾನ ಮಾಡಿದ ಮಹಿಳಾ ಅಥ್ಲಿಟ್

ಲೋಕಲ್ ಅನಸ್ತೇಶಿಯಾ ಬಳಸಿ ಮಾಡುವ ಈ ಕಸಿ ವಿಧಾನದಿಂದ ಅಪಾಯಗಳು ಬಹಳ ಕಡಿಮೆ. ಸೋಂಕಿನ ಬಾಧೆ ಇರುವುದಿಲ್ಲ. ಆದರೆ ನುರಿತ ತಜ್ಞರು ಕಸಿ ಮಾಡಿದರೆ, ತಲೆಯ ಕೂದಲುಗಳ ನಡುವೆ ಕಲೆಗಳು ಕಾಣುವುದಿಲ್ಲ.

ಪ್ರಾಕೃತಿವಾಗಿ ಹೊಸ ಕೂದಲು ಹುಟ್ಟಿದಂತೆ ಇತರರಿಗೆ ಕಾಣುತ್ತದೆ. ಒಂದು ವಾರ ಮನೆಯಲ್ಲಿ ಸುಧಾರಿಸಿಕೊಂಡ ನಂತರ, ಕಸಿ ಚಿಕಿತ್ಸೆ ಮಾಡಿಸಿಕೊಂಡವರು ಆ ಬಳಿಕ ಹೊರಗಡೆ ತಿರುಗಾಡಬಹುದು. 6-7 ತಿಂಗಳ ಒಳಗಾಗಿ ಉತ್ತಮ ಕೂದಲ ಬೆಳವಣಿಗೆ ಕಾಣಬಹುದಾಗಿದೆ. ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ ಎನ್ನುತ್ತಾರೆ ವೈದ್ಯರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...