ಈಗ ಇ ಸ್ಕೂಟರ್ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ಯಾವುದು ಬೆಸ್ಟ್, ಬ್ಯಾಟರಿ ಬ್ಯಾಕಪ್ ಹೇಗೆ ? ಬೆಲೆ ಎಷ್ಟು ? ಹೊಸತೇನಿದೆ ಎಂಬ ವಿಚಾರ ವಿನಿಮಯ ನಡೆಯುತ್ತಿದೆ. ಇದೇ ವೇಳೆ ಓಲಾ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಅದರ ಬಗ್ಗೆ ಒಂದಷ್ಟು ಮಾಹಿತಿ ಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಓಲಾ ಇ-ಸ್ಕೂಟರ್ ನೆದರ್ಲ್ಯಾಂಡ್ನ ವಾಹನ ತಯಾರಕರಾದ ಎಟರ್ಗೋ ಅವರ ಆಪ್ ಸ್ಕೂಟರ್ ಅನ್ನು ಆಧರಿಸಿದೆ. ಕೆಲವು ವರ್ಷಗಳ ಹಿಂದೆ ಓಲಾ ಕಂಪನಿ ಸ್ವಾಧೀನಪಡಿಸಿಕೊಂಡಿತ್ತು.
100 ಮೀ. ಓಟದ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಬರೆದ ಶತಾಯುಷಿ
ಓಲಾ ಸ್ಕೂಟರ್ನ ವಿನ್ಯಾಸ ಪ್ಲಾನ್ ಬಹಳ ಸರಳವಾಗಿದೆ ಮತ್ತು ಕನಿಷ್ಠ ಮಟ್ಟದಲ್ಲಿದೆ. 12 ಇಂಚಿನ ಮಿಶ್ರಲೋಹದ ಚಕ್ರಗಳು ಮತ್ತು ಎಲ್ಇಡಿ ಹೆಡ್ ಮತ್ತು ಟೈಲ್ ಲೈಟ್ಗಳನ್ನು ಹೊಂದಿದೆ.
ಆಗಸ್ಟ್ 15 ರಂದು ಬಿಡುಗಡೆಯಾದ ನಂತರ ಭಾರತೀಯ ಇವಿ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದೆ. ಘೋಷಣೆಯಾದ 24 ಗಂಟೆಗಳ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ಗಳನ್ನು ಪಡೆದುಕೊಂಡಿತ್ತು. ಡಿಸೆಂಬರ್ 16ರಂದು ತನ್ನ ಇ-ಸ್ಕೂಟರ್ನ ಹೊಸ ಆರ್ಡರ್ಗಳ ಪ್ರಕ್ರಿಯೆ ಆರಂಭಿಸಲಿದೆ.
ಓಲಾ ಇ-ಸ್ಕೂಟರ್ ನಿಮ್ಮ ಮನಸ್ಸಿನಲ್ಲಿದ್ದರೆ, ಎಸ್ ಒನ್ ಮತ್ತು ಎಸ್ ಒನ್ ಪ್ರೊ ಎರಡರ ನಡುವಿನ ವ್ಯತ್ಯಾಸಗಳನ್ನು ಕಂಡುಕೊಳ್ಳುವುದು ಉತ್ತಮ.
ವರ್ಕ್ ಫ್ರಂ ಹೋಮ್ ಅಂತ್ಯ: ಕಚೇರಿಯಿಂದಲೇ ಎಲ್ಲಾ ಉದ್ಯೋಗಿಗಳು ಕೆಲಸ ಮಾಡಲು ಟಿಸಿಎಸ್ ಆದೇಶ
ಈ ಸ್ಕೂಟರ್ಗಳು ಕೀ ರಹಿತವಾಗಿ ಕಾರ್ಯ ನಿರ್ವಹಿಸಲಿವೆ ಮತ್ತು ಮೊಬೈಲ್ ಫೋನ್ ಅಪ್ಲಿಕೇಶನ್ ಬಳಸಿ ಪ್ರಾರಂಭಿಸಬಹುದು. ಎಷ್ಟು ಮಂದಿ ಒಂದೇ ವಾಹನ ಓಡಿಸುತ್ತಾರೋ ಅಷ್ಟು ಪ್ರೊಫೈಲ್ ಗಳನ್ನು ಮಾಡಬಹುದು.
ಭವಿಷ್ಯದ ಅಪ್ಲಿಕೇಶನ್ ಅಪ್ ಡೇಟ್ ಮಾಡಿಕೊಳ್ಳುವುದು, ಪೋಷಕರ ನಿಯಂತ್ರಣ ಮತ್ತು ಜಿಯೋಫೆನ್ಸಿಂಗ್ ಸೇರಿದಂತೆ ವೈಶಿಷ್ಟ್ಯಗಳನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಗಳಿವೆ. ನೀವು ಸ್ಕೂಟರ್ ಅನ್ನು ತಲುಪಿದಾಗ ಅದು ಸ್ವತಃ ಅನ್ಲಾಕ್ ಆಗುತ್ತದೆ. ಅಂತಹ ವ್ಯವಸ್ಥೆ ಕೂಡ ಬರಲಿದೆ.
ರೈಡ್ ಮೋಡ್ಗಳ ವಿಷಯದಲ್ಲಿ, S1 ಎರಡು ವಿಧಾನಗಳೊಂದಿಗೆ ಬರುತ್ತದೆ. ಸಾಮಾನ್ಯ ಮತ್ತು ಸ್ಪೋರ್ಟ್ಸ್, ಆದರೆ S1 ಪ್ರೊ ಹೆಚ್ಚುವರಿ ‘ಹೈಪರ್’ ಮೋಡ್ ಅನ್ನು ಹೊಂದಿದೆ.
S1 ನಲ್ಲಿನ 2.97 kWh ಬ್ಯಾಟರಿಗೆ ಹೋಲಿಸಿದರೆ S1 Pro 3.98kWh ನೊಂದಿಗೆ ಬರುವುದರಿಂದ ಬ್ಯಾಟರಿಗಳಲ್ಲಿ ವ್ಯತ್ಯಾಸವಿದೆ.
S1 ಗೆ ಪೂರ್ಣ ಚಾರ್ಜ್ ಮಾಡುವ ಸಮಯ 4 ಗಂಟೆ 48 ನಿಮಿಷಗಳು, S1 Pro ನಲ್ಲಿ ಪೂರ್ಣ ಚಾರ್ಜ್ ಮಾಡಲು 6 ಗಂಟೆ 30 ನಿಮಿಷಗಳು. ಗರಿಷ್ಠ ವೇಗದ ವಿಷಯದಲ್ಲಿ, S1 90 kmph ಗೆ ಸೀಮಿತ. ಆದರೆ S1 Pro 115 kmph ವರೆಗೆ ಹೋಗಬಹುದು.
ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಸ್ನೇಹಿತೆ ಜೊತೆ ಡಾನ್ಸ್: ಹೃದಯಸ್ಪರ್ಶಿ ವಿಡಿಯೋ ವೈರಲ್
S1 Pro ಕೂಡ ಸ್ವಲ್ಪ ವೇಗವಾಗಿ ಸಾಗಲಿದೆ, 0-30 kmph ಅನ್ನು 3 ಸೆಕೆಂಡುಗಳಲ್ಲಿ ಮತ್ತು 0-60 5 ಸೆಕೆಂಡುಗಳಲ್ಲಿ ತಲುಪಲಿದೆ. ಇದಕ್ಕೆ ಹೋಲಿಸಿದರೆ, S1 ಕ್ರಮವಾಗಿ 3.6 ಮತ್ತು 7 ಸೆಕೆಂಡುಗಳನ್ನು ತೆಗೆದುಕೊಳ್ಳಲಿದೆ.
ಐದು ವಿಭಿನ್ನ ಬಣ್ಣಗಳಲ್ಲಿ ಸ್ಕೂಟರ್ ಲಭ್ಯ. ಧ್ವನಿ ಸಹಾಯ, ಕ್ರೂಸ್ ನಿಯಂತ್ರಣ ಮತ್ತು ಹಿಲ್ ಹೋಲ್ಡ್ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿವೆ.
S1 ನಿಂದ ಒಂದು-ಬಾರಿ ಪೂರ್ಣ ಚಾರ್ಜ್ನಲ್ಲಿ ಸುಮಾರು 120 ಕಿಮೀಗಳನ್ನು ಪ್ರಯಾಣಿಸಬಹುದು. ಆದರೆ S1 ಪ್ರೊನ ದೊಡ್ಡ ಬ್ಯಾಟರಿಯು ಸುಮಾರು 180 ಕಿಮೀಗಳಷ್ಟು ಚಲಿಸುವಂತೆ ಮಾಡುತ್ತದೆ.
ಬೆಲೆ ವಿಚಾರಕ್ಕೆ ಬಂದರೆ S1 ಸ್ಕೂಟರ್ಗೆ 85,000 ರೂ. S1 Pro ಸ್ಕೂಟರ್ಗೆ ಸುಮಾರು 1.10 ಲಕ್ಷ ರೂಪಾಯಿ (ದೆಹಲಿಯಲ್ಲಿ) ವೆಚ್ಚವಾಗುತ್ತದೆ.