ಸಾಗರದ ಆಳದಲ್ಲಿ ಯಾವ ಅದ್ಭುತಗಳು ಅಡಗಿವೆ ಎನ್ನುವ ಊಹೆ ಕೂಡ ನಮಗಿಲ್ಲ. ಜಲಚರಗಳು, ಕೀಟಗಳು ಸೇರಿದಂತೆ ಬೃಹತ್ ಜೀವಿಗಳು ಇದ್ದರೂ ಅಚ್ಚರಿ ಇಲ್ಲ. ಆದರೆ, ಇತ್ತೀಚೆಗೆ ಗುಲಾಬಿ ಬಣ್ಣದ ಡಾಲ್ಫಿನ್ ವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
SHOCKING NEWS: ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ತಾಯಿ ಆತ್ಮಹತ್ಯೆ
ಈ ವಿಡಿಯೊವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಾಂತ ನಂದಾ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾವ ಸ್ಥಳದಲ್ಲಿ ಈ ವಿಡಿಯೊ ಚಿತ್ರಿಸಲಾಗಿದೆ ಎಂದು ಅವರು ಉಲ್ಲೇಖಿಸಿಲ್ಲ. ಇದುವರೆಗೂ ನಾವು ನೀಲಿ ಮತ್ತು ಕಪ್ಪು ಡಾಲ್ಫಿನ್ಗಳನ್ನು ಮಾತ್ರ ಕಂಡಿದ್ದೆವು. ಪಿಂಕ್ ಡಾಲ್ಫಿನ್ ಇರುವ ಬಗ್ಗೆ ಕಲ್ಪನೆಯೂ ಇರಲಿಲ್ಲ ಎಂದು ಟ್ವೀಟಿಗರು ಪ್ರತಿಕ್ರಿಯಿಸಿದ್ದಾರೆ. ‘Susanta Nanda IFS’ ಈ ಖಾತೆಯಲ್ಲಿ ವಿಡಿಯೊ ಕಾಣಬಹುದಾಗಿದೆ.