ವೈದ್ಯಕೀಯ ಲೋಕದಲ್ಲಿ ದೊಡ್ಡ ಕ್ರಾಂತಿ ಎಂಬಂತೆ ಅಮೆರಿಕದ ವೈದ್ಯರು ಮನುಷ್ಯನಿಗೆ ಹಂದಿಯ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಮನುಷ್ಯನ ದೇಹದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ.
ಹೊಟೇಲ್ ಗೆ ಹೋದವರು ಬರಿಗೈನಲ್ಲಿ ಬರಬೇಡಿ, ಅಲ್ಲಿ ಸಿಗಲಿದೆ ಉಚಿತ ವಸ್ತು
ಒಂದು ವೇಳೆ ಈ ಶಸ್ತ್ರಚಿಕಿತ್ಸೆಯು ಸಂಪೂರ್ಣವಾಗಿ ಯಶಸ್ವಿಯಾದಲ್ಲಿ ಮೂತ್ರಪಿಂಡಗಳ ಕೊರತೆಗೆ ಬಹುದೊಡ್ಡ ಪರಿಹಾರ ಸಿಕ್ಕಂತಾಗುತ್ತದೆ.
ಸ್ನೇಹಕ್ಕೆ ಅಡ್ಡಿ ತಂದಿತಾ ಕೋಮು ಘರ್ಷಣೆ….? ಗೆಳೆಯರಿಂದಲೇ ನಡೀತು ಯುವಕನ ಬರ್ಬರ ಕೊಲೆ….!
ನ್ಯೂಯಾರ್ಕ್ ಸಿಟಿಯ ಎನ್ವೈಯು ಲ್ಯಾಂಗೋನ್ ಹೆಲ್ತ್ನಲ್ಲಿ ಈ ಕಿಡ್ನಿ ಕಸಿ ಮಾಡಲಾಗಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಹಂದಿಯ ಕಿಡ್ನಿಯನ್ನು ಬಳಸಲಾಗಿತ್ತು. ಪ್ರತಿರಕ್ಷಣಾ ವ್ಯವಸ್ಥೆಯು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುವುದನ್ನು ತಪ್ಪಿಸುವ ಸಲುವಾಗಿ ಅದರ ವಂಶವಾಹಿಗಳನ್ನು ತೆಗೆದು ಹಾಕಲಾಗಿತ್ತು.
ಅಂದಹಾಗೆ ಈ ಕಸಿ ಚಿಕಿತ್ಸೆಗೆ ಒಳಗಾದ ವ್ಯಕ್ತಿಯು ಮೆದುಳು ನಿಷ್ಕ್ರಿಯಗೊಂಡ ರೋಗಿಯಾಗಿದ್ದು ಕಿಡ್ನಿ ಸಂಬಂಧಿ ಸಮಸ್ಯೆಯನ್ನು ಹೊಂದಿದ್ದರು. ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಗೆ ವೆಂಟಿಲೇಟರ್ನ್ನು ತೆಗೆಯುವ ಮುನ್ನ ಈ ಪ್ರಯೋಗವನ್ನು ಮಾಡಲು ಕುಟುಂಬಸ್ಥರು ಒಪ್ಪಿಗೆ ನೀಡಿದ್ದರು.