ಸರ್ವವೂ ಅಂತರ್ಜಾಲಮಯವಾಗಿರುವ ಇಂದಿನ ದಿನಮಾನದಲ್ಲಿ ಶೇರು ಮಾರುಕಟ್ಟೆ ವಹಿವಾಟುಗಳೂ ಕೂಡ ಜನಸಾಮಾನ್ಯರಿಗೆ ಅರ್ಥವಾಗುವಂತೆ ಆಗಿದೆ.
ಸ್ಟಾಕ್ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದು ಇಂದಿನ ದಿನಗಳಲ್ಲಿ ನೀವು ತೆಗೆದುಕೊಳ್ಳಬಹುದಾದ ಉತ್ತಮ ನಿರ್ಧಾರಗಳಲ್ಲಿ ಒಂದು ಎಂದು ಆರ್ಥಿಕ ತಜ್ಞರು ಹೇಳುತ್ತಲೇ ಇರುತ್ತಾರೆ. ನಿಮ್ಮ ಚಾರ್ಟರ್ಡ್ ಅಕೌಂಟೆಂಟ್ ಇದೇ ವಿಚಾರವನ್ನು ಸಲಹೆ ಮಾಡುತ್ತಾರೆ.
ಕೊರೊನಾದಿಂದ ಗುಣಮುಖನಾದವನು ಬಳಿಕ ನೇಣಿಗೆ ಶರಣು; ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪೋಷಕರು
ಇತ್ತೀಚಿನ ದಿನಗಳಲ್ಲಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಕೇವಲ ಶ್ರೀಮಂತರು ಮಾಡುವ ಕೆಲಸವಾಗಿ ಉಳಿದಿಲ್ಲ. ಮುಂಬೈ ಆಟೋ ಚಾಲಕರೊಬ್ಬರು ಸ್ಟಾಕ್ ಮಾರ್ಕೆಟ್‌ನ ವಿವರಗಳನ್ನು ತಮ್ಮ ಮೊಬೈಲ್‌ನಲ್ಲಿ ಪರೀಕ್ಷಿಸಿಕೊಳ್ಳುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ದಿನೇಶ್ ಸಾಯಿರಾಂ ಹೆಸರಿನ ವ್ಯಕ್ತಿಯೊಬ್ಬರು ಈ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪವರ್ ಫೈನಾನ್ಸ್ ಕಾರ್ಪೋರೇಷನ್ ನಿಯಮಿತದ ಶೇರುಗಳ ಬೆಲೆಯನ್ನು ಈ ಆಟೋರಿಕ್ಷಾ ಚಾಲಕ ಪರೀಕ್ಷಿಸುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.
“ಇದು ಒಳ್ಳೆಯ ಸೂಚಕ ಎಂದು ಜನರು ಹೇಳುತ್ತಿದ್ದಾರೆ. ಅದು ಹಾಗೇ ಇರಲಿ. ವೇತನೇತರ ಕೆಲಸದಲ್ಲಿರುವ ವ್ಯಕ್ತಿಯೊಬ್ಬರು ಹೂಡಿಕೆಯ ಬಗ್ಗೆ ಚಿಂತನೆ ಮಾಡುತ್ತಿರುವುದು ನೋಡಲು ಖುಷಿಯಾಗುತ್ತದೆ. ಆತನಿಗೆ ಒಳ್ಳೆಯ ಸಲಹೆ ಸಿಗುತ್ತದೆ ಎಂಬ ಭರವಸೆ ಇದೆ” ಎಂದು ದಿನೇಶ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
https://twitter.com/Dinesh_Sairam/status/1433709419372630057?ref_src=twsrc%5Etfw%7Ctwcamp%5Etweetembed%7Ctwterm%5E1433709419372630057%7Ctwgr%5E%7Ctwcon%5Es1_&ref_url=https%3A%2F%2Fwww.indiatimes.com%2Ftrending%2Fhuman-interest%2Fmumbai-auto-driver-checks-out-stock-market-chart-548698.html