alex Certify ಶವಪೆಟ್ಟಿಗೆ ಆಕಾರದ ಕಚೇರಿ ಕುರ್ಚಿಗಳು…! ಅಚ್ಚರಿ ತರಿಸಿದೆ ವಿಚಿತ್ರ ಕ್ರಿಯಾಶೀಲತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶವಪೆಟ್ಟಿಗೆ ಆಕಾರದ ಕಚೇರಿ ಕುರ್ಚಿಗಳು…! ಅಚ್ಚರಿ ತರಿಸಿದೆ ವಿಚಿತ್ರ ಕ್ರಿಯಾಶೀಲತೆ

ಕ್ರಿಯಾಶೀಲತೆ ಮೂಲಕ ಗಮನ ಸೆಳೆಯುವ ಕಲೆಯಲ್ಲಿ ಕೆಲವರು ಎತ್ತಿದ ಕೈ. ದಿನಕ್ಕೆ ಆರರಿಂದ ಎಂಟು ಗಂಟೆಗಳ ಕಾಲ ಕುಳಿತುಕೊಳ್ಳುವುದು ನಿಮ್ಮ ಸಾಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಕಂಡುಕೊಂಡಿದೆ ಎಂದು ಶವಪೆಟ್ಟಿಗೆಯ ಆಕಾರದ ಕಚೇರಿ ಕುರ್ಚಿಗಳ ಚಿತ್ರವನ್ನು ಚೇರ್​ಬಾಕ್ಸ್​ ಹೆಸರಿನ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ.

ಯುಕೆ ಮೂಲದ ವಿನ್ಯಾಸಕರೊಬ್ಬರು ದಿ ಲಾಸ್ಟ್​ ಶಿಫ್ಟ್ ಆಫೀಸ್​ ಚೇರ್​ ಎಂಬ ಆ್ಯಡ್​ ಕಚೇರಿ ಕುರ್ಚಿಯನ್ನು ರಚಿಸಿದ್ದು, ಇದು ವಾಸ್ತವವಾಗಿ ತಮ್ಮ ಕಛೇರಿಯಲ್ಲಿ ದೀರ್ಘ ಕಾಲ ಕಳೆಯುವ ಜನರಿಗೆ ಎಂದು ಕರೆದುಕೊಂಡಿದ್ದಾರೆ.

ದಿ ಲಾಸ್ಟ್​ ಶಿಫ್ಟ್​ ಆಫೀಸ್​ ಚೇರ್​ನ ವಿನ್ಯಾಸವು ಶವಪೆಟ್ಟಿಗೆಯಂತೆ ವಿಲಕ್ಷಣವಾಗಿ ಕಾಣಿಸಿದ್ದು, ಇದರ ರಚನಾಕಾರ ಮಾತ್ರ ತನ್ನನ್ನು ಸಮರ್ಥಿಸಿಕೊಂಡಿದ್ದಾನೆ. ಅಧ್ಯಯನ ವರದಿ ಉಲ್ಲೇಖಿಸಿದ್ದಾನೆ.

ಸ್ನೇಹಿತನ ಮನೆಯಲ್ಲಿ ಮಂಚದ ಮೇಲೆ ತನ್ನ ಕಾಲುಗಳನ್ನು ನೆಲದ ಮೇಲೆ ಇಟ್ಟು ಮಲಗಿದ್ದಾಗ ನಾನು ಈ ಭಂಗಿಯಲ್ಲಿ ಸತ್ತರೆ, ಅವರು ನನ್ನನ್ನು ಹಾಗೆ ಹೂಳಬೇಕಾಗಬಹುದು ಎಂದು ನಾನು ಭಾವಿಸಿದೆ. ನನ್ನನ್ನು ಶವಪೆಟ್ಟಿಗೆಯಲ್ಲಿ ಹಾಕಲು ತುಂಬಾ ಅನಾನುಕೂಲವಾಗುತ್ತದೆ. ಬಹುಶಃ ಈ ಸಂದರ್ಭದಲ್ಲಿ ಅವರಿಗೆ ವಿಶೇಷ ಶವಪೆಟ್ಟಿಗೆಯ ಅಗತ್ಯವಿದೆ ಎಂದು ಹಾಸ್ಯ ಮಾಡಿದ್ದಾರೆ.

ಅಂದು ನಾನು ಅದರ ಬಗ್ಗೆ ನನ್ನ ಸ್ನೇಹಿತರಿಗೆ ಹೇಳಿದೆ, ಎಲ್ಲರೂ ನಕ್ಕಿದ್ದೇವೆ, ಆದರೆ ಒಂದೆರಡು ವಾರಗಳ ನಂತರ, ನಾನು ಆ ಕಲ್ಪನೆಗೆ ಮರಳಿದೆ. ಅದನ್ನು ಸ್ವಲ್ಪ ಹೆಚ್ಚು ಅನ್ವೇಷಿಸಿದೆ. ನಂತರ, ನಾನು ಸಾಫ್ಟ್​ವೇರ್​ನಲ್ಲಿ 3ಡಿ ಮಾದರಿಯನ್ನು ತಯಾರಿಸಿದೆ, ಅದನ್ನು ರೆಂಡರ್​ ಮಾಡಿ ಮತ್ತು ಅದನ್ನು ಆನ್​ಲೈನ್​ನಲ್ಲಿ ಪೋಸ್ಟ್​ ಮಾಡಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...