ಉತ್ತರಾಖಂಡ್ ಸಚಿವ ಸ್ವಾಮಿ ಯತೀಶ್ವರಾನಂದ ತಮ್ಮ ಕಾಲಿನ ಹೆಬ್ಬೆರಳಿಗೆ ಮಾಸ್ಕ್ ಸಿಕ್ಕಿಸಿಕೊಂಡಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ಫೋಟೋದಲ್ಲಿ ಉತ್ತರಾಖಂಡ್ ಬಿಜೆಪಿ ಸರ್ಕಾರದ ಕೈಗಾರಿಕಾ ಸಚಿವ ಅಧಿಕೃತ ಸಭೆಯಲ್ಲಿ ಭಾಗವಹಿಸಿರೋದನ್ನ ಕಾಣಬಹುದಾಗಿದೆ. ಈ ಸಭೆಯು ಯಾವಾಗ ಹಾಗೂ ಎಲ್ಲಿ ನಡೆದಿದೆ ಅನ್ನೋದಕ್ಕೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಕೊಠಡಿಯೊಂದರಲ್ಲಿ ನಡೆಯುತ್ತಿರುವ ಸಭೆಯಲ್ಲಿ ಯತೀಶ್ವರಾನಂದರಾಗಲಿ ಅಥವಾ ಇನ್ನಿಬ್ಬರು ಸಚಿವರಾದ ಬಿಶನ್ ಸಿಂಗ್ ಚುಫಾಲ್, ಸುಬೋಧ್ ಯುನಿಯಾಲ್ ಹಾಗೂ ಪಕ್ಷದ ಇತರೆ ಯಾವುದೇ ಮುಖಂಡರಾಗಲಿ ಮಾಸ್ಕ್ ಧರಿಸಿದ್ದು ಫೋಟೋದಲ್ಲಂತೂ ಕಂಡು ಬಂದಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಸಚಿವ ಯತೀಶ್ವರಾನಂದ ತಮ್ಮ ಕಾಲಿನ ಹೆಬ್ಬೆರಳಿಗೆ ಸರ್ಜಿಕಲ್ ಮಾಸ್ಕ್ ಸಿಕ್ಕಿಸಿಕೊಂಡಿದ್ದಾರೆ.
ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ಅಂಚೆ ಕಚೇರಿಯಲ್ಲೇ ರಿಟರ್ನ್ಸ್ ಸಲ್ಲಿಸಲು ಅವಕಾಶ
ಡೆಲ್ಟಾ ರೂಪಾಂತರಿ ವೈರಸ್ ಹಾಗೂ ಕೊರೊನಾ ಮೂರನೇ ಅಲೆಯಿಂದ ಪಾರಾಗಲು ಯಾವ ರೀತಿಯಲ್ಲಿ ಮಾಸ್ಕ್ ಧರಿಸಬೇಕು ಅನ್ನೋದು ಉತ್ತರಾಖಂಡ್ ಸಚಿವ ಹಾಗೂ ಬಿಜೆಪಿ ನಾಯಕ ಯತೀಶ್ವರಾನಂದ ತೋರಿಸಿಕೊಟ್ಟಿದ್ದಾರೆ ಎಂದು ಟ್ವಿಟರ್ನಲ್ಲಿ ಟೀಕಿಸಲಾಗಿದೆ.
ಇಷ್ಟೊಂದು ವೈಜ್ಞಾನಿಕವಾಗಿ ಮಾಸ್ಕ್ ಧರಿಸೋಕೆ ಇನ್ಯಾರಿಗೂ ಗೊತ್ತಿರೋಕೆ ಸಾಧ್ಯವೇ ಇಲ್ಲ ಎಂದು ಅನೇಕರು ವ್ಯಂಗ್ಯ ಮಾಡಿದ್ದಾರೆ.
ಇತ್ತ ಉತ್ತರಾಖಂಡ್ ಕಾಂಗ್ರೆಸ್ ವಕ್ತಾರೆ ಗರೀಮಾ ದಸೌನಿ ಕೂಡ ಸಚಿವರ ವಿರುದ್ಧ ಹರಿಹಾಯ್ದಿದ್ದು, ಸೋಂಕನ್ನ ತಡೆಯುವಲ್ಲಿ ಸಚಿವರು ಹಾಗೂ ಬಿಜೆಪಿ ನಾಯಕರು ಎಷ್ಟು ಗಂಭೀರವಾಗಿದ್ದಾರೆ ಅನ್ನೋದನ್ನ ಈ ಫೋಟೋ ತೋರಿಸುತ್ತಿದೆ. ಜನರಿಗೆ ಮಾಸ್ಕ್ ಧರಿಸಿ ಎಂದು ಹೇಳುವ ಇವರು ಮಾಡೋದು ಇಂತ ಕೆಲಸ ಎಂದು ಲೇವಡಿ ಮಾಡಿದ್ದಾರೆ.