alex Certify ಭಾರತೀಯ ಕ್ಲಿಕ್ಕಿಸಿರುವ ಈ ಫೋಟೋಗೆ ಪ್ರತಿಷ್ಠಿತ ಛಾಯಾಚಿತ್ರ ಪ್ರಶಸ್ತಿ ಮನ್ನಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಕ್ಲಿಕ್ಕಿಸಿರುವ ಈ ಫೋಟೋಗೆ ಪ್ರತಿಷ್ಠಿತ ಛಾಯಾಚಿತ್ರ ಪ್ರಶಸ್ತಿ ಮನ್ನಣೆ

ಕಾಶ್ಮೀರದ ಕಬಾಬ್ ಮಾರಾಟಗಾರನ ಆಕರ್ಷಕ ಫೋಟೋ ತೆಗೆದ ಭಾರತೀಯ ಛಾಯಾಗ್ರಾಹಕರೊಬ್ಬರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಲಭಿಸಿದೆ. ಕಬಾಬಿಯಾನ ಎಂಬ ಹೆಸರಿನ ಛಾಯಾಚಿತ್ರಕ್ಕೆ ನಾಮಕರಣ ಮಾಡಲಾಗಿದ್ದು, ಇದನ್ನು ತೆಗೆದಿರುವ ದೇವದತ್ತ ಚಕ್ರವರ್ತಿ ಅವರಿಗೆ 2022 ನೇ ಸಾಲಿನ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಪ್ರಶಸ್ತಿ ಲಭಿಸಿದೆ.

545 PSI ನೇಮಕಾತಿ ಅಕ್ರಮ: ಕಿಂಗ್ ಪಿನ್ ಗಳೊಂದಿಗೆ ಸಂಪರ್ಕದಲ್ಲಿದ್ದವರಿಗೆ ಬಿಗ್ ಶಾಕ್

ಕಾಶ್ಮೀರದ ಶ್ರೀನಗರದ ರಸ್ತೆಬದಿಯಲ್ಲಿ ವ್ಯಾಪಾರಿಯೊಬ್ಬ ವಾಝ್ವಾನ್ ಕಬಾಬ್ ಅನ್ನು ಇದ್ದಿಲಿನ ಮೇಲೆ ಬೇಯಿಸುವ ದೃಶ್ಯವನ್ನು ಚಕ್ರವರ್ತಿ ಸೆರೆ ಹಿಡಿದಿದ್ದರು. ಶ್ರೀನಗರದ ಖಯ್ಯಾಮ್ ಚೌಕ್ ಹಗಲಿನ ವೇಳೆ ಇತರೆ ರಸ್ತೆಗಳಿಗಿಂತ ಭಿನ್ನವಾಗೇನೂ ಇಲ್ಲ. ಆದರೆ, ಸಂಜೆಯಾಗುತ್ತಿದ್ದಂತೆಯೇ ಹಲವಾರು ಇದ್ದಿಲಿನ ಒಲೆಗಳು ಹತ್ತಿಕೊಳ್ಳುತ್ತವೆ.

ಆ ಸಂದರ್ಭದಲ್ಲಿ ಈ ರಸ್ತೆಯಿಂದ ಬರುವ ಪರಿಮಳ, ಬಿಸಿ ಬಿಸಿ ವಾಝ್ವಾನ್ ಕಬಾಬ್ ನ ಹೊಗೆಯಂತಹ ವೈಶಿಷ್ಟ್ಯತೆಗಳು ಈ ರಸ್ತೆಯನ್ನು ಆಹಾರ ಪ್ರಿಯರ ಸ್ವರ್ಗವನ್ನಾಗಿಸಿವೆ ಎಂದು ಛಾಯಾಗ್ರಾಹಕ ತಾನು ಕ್ಲಿಕ್ಕಿಸಿರುವ ಫೋಟೋಗೆ ಶೀರ್ಷಿಕೆಯನ್ನು ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಶಸ್ತಿಯ ಸಂಸ್ಥಾಪಕಿ ಮತ್ತು ನಿರ್ದೇಶಕಿ ಕ್ಯಾರೋಲಿನ್ ಕೆನ್ಯೊನ್ ಅವರು, “ಸುಂದರವಾಗಿ ಸೆರೆ ಹಿಡಿದಿರುವ ಹೊಗೆ, ಚಿನ್ನದಂತಹ ಬೆಳಕು, ಆಹಾರವನ್ನು ತಯಾರಿಸುವಾಗ ವಿಷಯವನ್ನು ಅಭಿವ್ಯಕ್ತಗೊಳಿಸಿರುವುದು ಮುದ ನೀಡುತ್ತದೆ’’ ಎಂದು ಬಣ್ಣಿಸಿದ್ದಾರೆ.

ಈ ಪ್ರತಿಷ್ಠಿತ ಪ್ರಶಸ್ತಿಗೆ ತಮ್ಮ ಛಾಯಾಚಿತ್ರ ಆಯ್ಕೆಯಾಗಿರುವುದಕ್ಕೆ ಆನಂದದಿಂದ ಕುಣಿದು ಕುಪ್ಪಳಿಸಿರುವ ಚಕ್ರವರ್ತಿ, ನನಗೆ ಇದನ್ನು ನಂಬಲು ಸಾಧ್ಯವೇ ಇಲ್ಲದಂತಾಗಿದೆ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...