alex Certify ನೆಟ್ಟಿಗರು ತಲೆಕೆರೆದುಕೊಳ್ಳುವಂತೆ ಮಾಡಿದೆ ಫುಟ್ಬಾಲ್ ಆಟಗಾರರ ಆಪ್ಟಿಕಲ್ ಇಲ್ಯೂಷನ್ ಫೋಟೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರು ತಲೆಕೆರೆದುಕೊಳ್ಳುವಂತೆ ಮಾಡಿದೆ ಫುಟ್ಬಾಲ್ ಆಟಗಾರರ ಆಪ್ಟಿಕಲ್ ಇಲ್ಯೂಷನ್ ಫೋಟೋ..!

ಛಾಯಾಚಿತ್ರಗಳನ್ನು ಕ್ಲಿಕ್ಕಿಸುವಾಗ ಸರಿಯಾದ ಸಮಯವು ಅತ್ಯಗತ್ಯ. ಒಂದು ಸೆಕೆಂಡ್ ಅಥವಾ ಎರಡು ಸೆಕೆಂಡ್ ಸಮಯದ ವಿಳಂಬವು ಛಾಯಾಚಿತ್ರಗಳಿಗೆ ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಉಂಟುಮಾಡಬಹುದು. ಕೆಲವೊಮ್ಮೆ ಈ ಛಾಯಾಚಿತ್ರವು ಭ್ರಮೆಯಂತೆ ಕಾಣಿಸಬಹುದು. ಪಂದ್ಯವೊಂದರಲ್ಲಿ ಗೋಲು ಹೊಡೆದು ಸಂಭ್ರಮಿಸುತ್ತಿರುವ ಫುಟ್ಬಾಲ್ ಆಟಗಾರರ ಛಾಯಾಚಿತ್ರ ಇದಕ್ಕೆ ಸಾಕ್ಷಿಯಾಗಿದೆ. ಫೋಟೋವನ್ನು ಬೋರೆಡ್ಪಂಡ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಈ ಛಾಯಾಚಿತ್ರದಲ್ಲಿ, ಇಬ್ಬರು ಆಟಗಾರರು ಪರಸ್ಪರ ತಬ್ಬಿಕೊಳ್ಳುವುದನ್ನು ನಾವು ನೋಡಬಹುದು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಚಿತ್ರದಿಂದ ಗೊಂದಲಕ್ಕೊಳಗಾಗಿದ್ದಾರೆ. ಆಟಗಾರರು ತಮ್ಮ ಗೆಲುವಿನಲ್ಲಿ ಸಂತೋಷಪಡುತ್ತಿದ್ದಾರೆ ಎಂದು ಅವರು ಸ್ಪಷ್ಟವಾದ ಊಹೆಯನ್ನು ಮಾಡಬಹುದು. ಆದರೆ,  ಯಾವ ಆಟಗಾರನು ಯಾರನ್ನು ತಬ್ಬಿಕೊಂಡಿದ್ದಾನೆ..? ಎಂಬುದು ಮಾತ್ರ ಭ್ರಮನಿರಸನಗೊಳಿಸಿದೆ.

ಈ ಚಿತ್ರವು ಆಟಗಾರನು ತನ್ನ ಸಹ ಆಟಗಾರನನ್ನು ಹಿಂದಿನಿಂದ ತಬ್ಬಿಕೊಂಡಿದ್ದಾರೆ. ಆದರೆ, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಗೊಂದಲಕ್ಕೀಡು ಮಾಡಿದ ಪ್ರಶ್ನೆಯೆಂದರೆ, ಮುಂದೆ ನಿಂತಿರುವ ಇನ್ನೊಬ್ಬ ಆಟಗಾರ ತನ್ನ ಸಹ ಆಟಗಾರನನ್ನು ಹಿಂದಿನಿಂದ ಹೇಗೆ ತಬ್ಬಿಕೊಳ್ಳಬಹುದು. ಈ ಫೋಟೋ ಬಳಕೆದಾರರಿಗೆ ಅರ್ಥಮಾಡಿಕೊಳ್ಳಲು ಅತ್ಯಂತ ಕಷ್ಟಕರವಾದ ಸವಾಲಾಗಿತ್ತು. ಈ ರಹಸ್ಯವನ್ನು ಡಿಕೋಡ್ ಮಾಡಲು ಅನೇಕರು ಈ ಛಾಯಾಚಿತ್ರದ ಸಂಪೂರ್ಣ ನಕಲನ್ನು ಸಂಗ್ರಹಿಸಿದ್ರು.

ಅಂತಿಮವಾಗಿ ಬಳಕೆದಾರರು ತೀರ್ಮಾನಕ್ಕೆ ಬಂದ್ರು. ಬಳಕೆದಾರರ ಪ್ರಕಾರ, ಮೈದಾನದಲ್ಲಿ ಮೂರು ಆಟಗಾರರು ಇದ್ದರು. ಇಬ್ಬರು ಆಟಗಾರರು ಒಬ್ಬರನ್ನೊಬ್ಬರು ತಬ್ಬಿಕೊಂಡ ಕ್ಷಣ, ಮೂರನೇ ಆಟಗಾರನು ಅವರ ಹಿಂದೆ ಇದ್ದನು. ಈ ಮೂರನೇ ಆಟಗಾರ ಈ ಇಬ್ಬರು ಆಟಗಾರರ ನಡುವೆ ನಿಂತಿದ್ದಾಗ, ಕ್ಯಾಮರಾಪರ್ಸನ್ ಫೋಟೋ ಕ್ಲಿಕ್ಕಿಸಿದ್ದಾರೆ. ಇದು ಆ ಛಾಯಾಚಿತ್ರದ ಸಂಪೂರ್ಣ ದೃಷ್ಟಿಕೋನವನ್ನು ಬದಲಾಯಿಸಿತು. ಇದರಿಂದಾಗಿ ಮೂರನೇ ಆಟಗಾರನು ಇಬ್ಬರನ್ನು ಅಪ್ಪಿಕೊಂಡಂತೆ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...