ಆಡಳಿತಾರೂಢ ಕಾಂಗ್ರೆಸ್ನ ಇಬ್ಬರು ಶಾಸಕರು ತಮ್ಮ ಮಕ್ಕಳಿಗೆ ಉದ್ಯೋಗ ನೀಡುವ ಸಲುವಾಗಿ ಅಕ್ರಮ ನಡೆಸಿದ ಬಳಿಕ ಪಂಜಾಬ್ನ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಲೆಹ್ರಗಾಗಾದ ಪಿಹೆಚ್ಡಿ ಪದವೀಧರ ವಿದ್ಯಾರ್ಥಿ ಕೆಲಸ ಪಡೆಯಲು ಸಾಧ್ಯವಾಗದ ಕಾರಣ ಜೀವನೋಪಾಯಕ್ಕಾಗಿ ಜ್ಯೂಸ್ ಶಾಪ್ನ್ನು ತೆರೆದಿದ್ದಾನೆ.
32 ವಷರ್ದ ಚೇತನ್ ಕುಮಾರ್ ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಮಾಡಬೇಕೆಂಬ ಕನಸನ್ನ ಹೊಂದಿದ್ದರು. ಇದಕ್ಕಾಗಿ ಇವರು ಯುಜಿಸಿ – ಎನ್ಇಟಿ ಪರೀಕ್ಷೆಯನ್ನೂ ಪಾಸ್ ಮಾಡಿದ್ದರು. ಇಷ್ಟಾದರೂ ಸಹ ಅವರಿಗೆ ಕೆಲಸವನ್ನ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಜೀವನೋಪಾಯಕ್ಕಾಗಿ ಪುಟ್ಟ ಜ್ಯೂಸ್ ಅಂಗಡಿಯನ್ನ ಮಾಡಿಕೊಂಡಿದ್ದಾರೆ.
ಪದವಿ ಶಿಕ್ಷಣವನ್ನ ಪೂರೈಸಿದ ಬಳಿಕ ನಾನು ಕೆಲಸವನ್ನ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದೆ. ಬಳಿಕ ನನಗೆ ಯುಜಿಸಿ ಎನ್ಇಟಿ ಪರೀಕ್ಷೆ ಪಾಸ್ ಮಾಡದೇ ಸರ್ಕಾರಿ ನೌಕರಿ ಸಿಗೋದು ಕಷ್ಟ ಎಂದು ತಿಳಿದ ಬಳಿಕ ನಾನು ಸತತ ಪ್ರಯತ್ನ ಪಟ್ಟು 2019ರಲ್ಲಿ ಪರೀಕ್ಷೆ ಪಾಸ್ ಮಾಡಿದೆ. ಪಿಹೆಚ್ಡಿ ಪದವಿ ಪಡೆದ ಬಳಿಕವೂ ನನಗೆ ನೌಕರಿ ಮಾತ್ರ ಸಿಗಲಿಲ್ಲ ಅಂತಾರೆ ಚೇತನ್ ಕುಮಾರ್.
ಮನೆಯ ನಿರ್ವಹಣೆ ಮಾಡೋದು ಇನ್ನು ಅಸಾಧ್ಯ ಎಂದು ಎನಿಸಿತು. ಹೀಗಾಗಿ ಜೀವನೋಪಾಯಕ್ಕೆ ಏನಾದರೊಂದು ಮಾಡಲೇಬೇಕೆಂದು ನಿರ್ಧರಿಸಿ ಎರಡು ತಿಂಗಳ ಹಿಂದೆ ಜ್ಯೂಸ್ ಅಂಗಡಿ ತೆರೆದೆ ಎಂದು ಚೇತನ್ ಕುಮಾರ್ ಹೇಳಿದ್ದಾರೆ.