alex Certify BIG NEWS: ಮಕ್ಕಳಿಗೆ ಫೈಜರ್ ಕೋವಿಡ್-19 ಲಸಿಕೆ ಅನುಮೋದಿಸಿದ ಎಫ್‍‍ಡಿಎ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಕ್ಕಳಿಗೆ ಫೈಜರ್ ಕೋವಿಡ್-19 ಲಸಿಕೆ ಅನುಮೋದಿಸಿದ ಎಫ್‍‍ಡಿಎ

ವಾಷಿಂಗ್ಟನ್: 5 ರಿಂದ 11 ವರ್ಷದೊಳಗಿನ ಮಕ್ಕಳಿಗಾಗಿ ಫೈಜರ್ ಕೋವಿಡ್-19 ಲಸಿಕೆಯನ್ನು ಎಫ್‍ಡಿಎ(ಆಹಾರ ಮತ್ತು ಔಷಧ ಆಡಳಿತ) ಅನುಮೋದಿಸಿದೆ.

ಆಹಾರ ಮತ್ತು ಔಷಧ ಆಡಳಿತವು ಶುಕ್ರವಾರ 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್‌  ಲಸಿಕೆ ಪಡೆಯಲು ಅನುಮೋದನೆ ನೀಡಿದೆ. ಇದರಿಂದ 28 ಮಿಲಿಯನ್ ‌ಗಿಂತಲೂ ಹೆಚ್ಚು ಅಮೆರಿಕನ್ ಮಕ್ಕಳು ಮುಂದಿನ ವಾರದ ಆರಂಭದಲ್ಲಿ ವ್ಯಾಕ್ಸಿನೇಷನ್‌ ತೆಗೆದುಕೊಳ್ಳಲು ಅರ್ಹರಾಗಿದ್ದಾರೆ.

ಇದುವರೆಗೂ ಮಕ್ಕಳಿಗೆ ಕೋವಿಡ್ ಲಸಿಕೆ ಲಭ್ಯವಾಗಿರಲಿಲ್ಲ. ಹೀಗಾಗಿ ಮಕ್ಕಳ ಬಗ್ಗೆ ಹೆಚ್ಚು ಜಾಗರೂಕತೆ ವಹಿಸುವುದು ಅಗತ್ಯವಾಗಿತ್ತು. ಆದರೆ ಇನ್ಮುಂದೆ ಅವರೂ ಕೂಡ ಸಾಮಾನ್ಯ ಜೀವನಕ್ಕೆ ಮರಳಬಹುದು ಎಂದು ಎಫ್ ಡಿ ಎ ಲಸಿಕೆ ಮುಖ್ಯಸ್ಥ ಡಾ ಪೀಟರ್ ಮಾರ್ಕ್ಸ್ ಹೇಳಿದ್ದಾರೆ.

ವಯಸ್ಸಾದವರಿಗಿಂತ ಮಕ್ಕಳು ಕೋವಿಡ್-19 ನಿಂದ ತೀವ್ರವಾದ ಅನಾರೋಗ್ಯ ಅಥವಾ ಸಾವಿನ ಅಪಾಯ ಕಡಿಮೆ ಇದ್ದರೂ, 5 ರಿಂದ 11 ವರ್ಷ ವಯಸ್ಸಿನ ಹಲವು ಮಕ್ಕಳು ಗಂಭೀರ ಪರಿಣಾಮ ಎದುರಿಸಿದ್ದರು ಎಂಬ ಬಗ್ಗೆ ವರದಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...