alex Certify ಭೇಟಿ ವೇಳೆ ಕೋಮು ಗಲಭೆ ಸೃಷ್ಟಿಸಿ ಮೋದಿ ಹತ್ಯೆಗೆ ಪಿಎಫ್ಐ ಸಂಚು: ಬಯಲಾಯ್ತು ಆಘಾತಕಾರಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೇಟಿ ವೇಳೆ ಕೋಮು ಗಲಭೆ ಸೃಷ್ಟಿಸಿ ಮೋದಿ ಹತ್ಯೆಗೆ ಪಿಎಫ್ಐ ಸಂಚು: ಬಯಲಾಯ್ತು ಆಘಾತಕಾರಿ ಮಾಹಿತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಪಿಎಫ್ಐ ಸಂಚು ರೂಪಿಸಿದ್ದ ಆಘಾತಕಾರಿ ವಿಷಯ ಬಯಲಾಗಿದೆ.

ಜುಲೈ 12 ರಂದು ಪ್ರಧಾನಿ ಮೋದಿ ಬಿಹಾರ ಭೇಟಿ ಸಂದರ್ಭದಲ್ಲಿ ಕೋಮು ದಂಗೆ ಸೃಷ್ಟಿಸಿ ಅವರ ಹತ್ಯೆಗೆ ಪಿಎಫ್ಐ ಸಂಚು ರೂಪಿಸಿತ್ತು ಎನ್ನುವುದು ಬಂಧಿತ ಪಿಎಫ್ಐ ಮುಖಂಡರ ವಿಚಾರಣೆ ಸಂದರ್ಭದಲ್ಲಿ ಗೊತ್ತಾಗಿದೆ.

ಸೆ. 22 ರಂದು ದೇಶಾದ್ಯಂತ 90ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್ಐಎ, ಇಡಿ ಮತ್ತು ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ದಾಳಿಯ ಸಂದರ್ಭದಲ್ಲಿ ಹಲವು ಮುಖಂಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಬಂಧಿತ ಮುಖಂಡ ಶಫೀಕ್ ಪಾಯೆಥ್ ಎಂಬಾತ ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ಬಾಯಿಬಿಟ್ಟಿದ್ದಾನೆ. ಕಳೆದ ಜು. 12 ರಂದು ಮೋದಿ ಬಿಹಾರಕ್ಕೆ ಭೇಟಿ ನೀಡಿದ್ದ ವೇಳೆ ಕೋಮು ಗಲಭೆ ಸೃಷ್ಟಿಸುವ ಮೂಲಕ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ವಿಚಾರಣೆ ವೇಳೆ ಹೇಳಿದ್ದಾನೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...