alex Certify ಪಿಎಫ್ಐ ನಿಷೇಧದ ಬೆನ್ನಲ್ಲೇ RSS ಬ್ಯಾನ್ ಮಾಡಬೇಕೆಂದು ಹೇಳಿದ ಸಿದ್ಧರಾಮಯ್ಯ ವಿರುದ್ಧ ಯಡಿಯೂರಪ್ಪ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಫ್ಐ ನಿಷೇಧದ ಬೆನ್ನಲ್ಲೇ RSS ಬ್ಯಾನ್ ಮಾಡಬೇಕೆಂದು ಹೇಳಿದ ಸಿದ್ಧರಾಮಯ್ಯ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಶಿವಮೊಗ್ಗ: ಪಿಎಫ್ಐ ಸಂಘಟನೆ ದೇಶಕ್ಕೆ ಮಾರಕವಾಗಿತ್ತು. ಶಾಂತಿ ಭಂಗ, ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿ ಆದೇಶಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗಳು ಸುಮಾರು ವರ್ಷಗಳಿಂದ ಈ ರಾಷ್ಟ್ರದಲ್ಲಿ ಭಯೋತ್ಪಾದಕ ಕೆಲಸಗಳನ್ನು ಎಸಗುತ್ತಿದ್ದವು. ಈ ಸಂಘಟನೆ ನಿಷೇಧ ಮಾಡುವಂತೆ ಬಹುದಿನಗಳ ಬೇಡಿಕೆ ಆಗಿತ್ತು. ಸಂಘಟನೆ ನಿಷೇಧಕ್ಕೆ ಸತತ ಹೋರಾಟ ನಡೆದಿತ್ತು. ಅದರ ಫಲವಾಗಿ ಇಂದು ಜಯ ಸಿಕ್ಕಿದೆ ಎಂದರು.

ಪಿಎಫ್ಐ ಸಂಘಟನೆ ಸೇರಿದಂತೆ ಐದು ಸಂಘಟನೆಗಳನ್ನು ನಿಷೇಧ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ಹಿಂದೆಯೇ ಈ ಕೆಲಸ ಆಗಬೇಕಿತ್ತು. ಈಗಲಾದರೂ ಈ ತೀರ್ಮಾನ ತೆಗೆದುಕೊಂಡಿದ್ದ ಸ್ವಾಗತಾರ್ಹ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಯಾವಾಗಲೂ ತಲೆ ತಿರುಕ ಮಾತನಾಡೋದು ಸ್ವಾಭಾವಿಕ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಕಲ್ಪನೆ ಇಲ್ಲದೇ ಮಾತನಾಡ್ತಾರೆ. ಇಡೀ ದೇಶದಲ್ಲಿ ಪ್ರಾಮಾಣಿಕ ಕೆಲಸ ಮಾಡ್ತಿರುವ ಸಂಘಟನೆ ಆರ್.ಎಸ್.ಎಸ್. ಇಂತಹ ಆರ್.ಎಸ್.ಎಸ್. ಬಗ್ಗೆ ದೇಶದಲ್ಲಿ ನೂರಕ್ಕೆ ತೊಂಬತ್ತರಷ್ಟು ಜನ ಅಭಿಮಾನ ಹೊಂದಿದ್ದಾರೆ. ಅಂತಹ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡೋದು ಸಿದ್ದರಾಮಯ್ಯ ಯೋಗ್ಯತೆ ಬಗ್ಗೆ ತಿಳಿಸುತ್ತದೆ. ಅವರು ಏನೇ ಮಾತನಾಡಿದ್ರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರು ಈ ರೀತಿ ಹಗುರವಾಗಿ ಮಾತನಾಡಿ ಅವರ ಗೌರವ ಅವರೇ ಹಾಳು ಮಾಡಿಕೊಳ್ಳುತ್ತಾರೆ ಎಂದರು.

ಪಿಎಫ್ಐ ನಿಂದ ಏನೇನು ಅನಾಹುತ ಆಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿರುವ ಸಂಗತಿ. ಏನೇನು ಅನಾಹುತ ಆಗಿ ನಮ್ಮ ಕಾರ್ಯಕರ್ತರ ಕೊಲೆ ಆಗಿರುವುದು ಗೊತ್ತಿರುವ ಸಂಗತಿ. ಕಾನೂನು ರೀತಿ ಏನೇನು ಕ್ರಮ ಕೈಗೊಳ್ಳಬಹುದೋ ಎಲ್ಲವನ್ನು ತೆಗೆದುಕೊಳ್ಳುತ್ತಿದ್ದೇವೆ. ಮುಂದೆಯೂ ಕ್ರಮ ಕೈಗೊಳ್ಳುತ್ತೇವೆ. ಸರಿಯಾದ ಪಾಠ ಕಲಿಸುತ್ತೇವೆ. ಈ ಸಂಘಟನೆಗಳು ಬೇರೆ ಯಾವುದೇ ರೀತಿಯಲ್ಲಿ ತಲೆ ಎತ್ತಲು ಬಿಡುವುದಿಲ್ಲ. ಹಾಗೇನಾದ್ರೂ ತಲೆ ಎತ್ತುವ ಪ್ರಯತ್ನ ಮಾಡಿದ್ರೆ ಅದಕ್ಕೆ ತಕ್ಕಶಾಸ್ತಿಯನ್ನು ಪ್ರಧಾನಿ, ಗೃಹ ಸಚಿವರು ಕೈಗೊಳ್ಳುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...