alex Certify Viral Video | ಎರಡು ಸಾವಿರ ರೂ. ನೋಟು ಸ್ವೀಕರಿಸಲು ಹಿಂದೇಟು; ಹಾಕಿದ್ದ ಪೆಟ್ರೋಲ್‌ ವಾಪಾಸ್‌ ಪಡೆದ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಎರಡು ಸಾವಿರ ರೂ. ನೋಟು ಸ್ವೀಕರಿಸಲು ಹಿಂದೇಟು; ಹಾಕಿದ್ದ ಪೆಟ್ರೋಲ್‌ ವಾಪಾಸ್‌ ಪಡೆದ ಸಿಬ್ಬಂದಿ

ನೋಟು ವಾಪಸ್ ನೀಡುವ ಪ್ರಕ್ರಿಯೆಯಲ್ಲಿ ಜನ ಇದೀಗ ಹೆಚ್ಚೆಚ್ಚಾಗಿ 2 ಸಾವಿರ ರೂಪಾಯಿ ನೋಟನ್ನು ಚಲಾವಣೆ ಮಾಡ್ತಿದ್ದಾರೆ. ಇಷ್ಟು ದಿನ ಚಲಾವಣೆಯಾಗದ 2 ಸಾವಿರ ರೂಪಾಯಿ ನೋಟು ಆರ್ ಬಿ ಐ ಪ್ರಕಟಣೆ ಬಳಿಕ ಹೆಚ್ಚಾಗಿ ಚಲಾವಣೆಯಾಗ್ತಿದೆ. ಇಂತಹ ಪ್ರಕ್ರಿಯೆಯೊಂದರಲ್ಲಿ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.

ಪೆಟ್ರೋಲ್ ಹಾಕಿಸಿಕೊಂಡ ಬಳಿಕ 2 ಸಾವಿರ ರೂಪಾಯಿ ನೋಟು ನೀಡಿದ ಗ್ರಾಹಕರ ಸ್ಕೂಟರ್‌ನಿಂದ ಬಂಕ್ ಸಿಬ್ಬಂದಿ ಪೆಟ್ರೋಲ್ ವಾಪಸ್ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ. ಈ ವಿಡಿಯೋ ವೈರಲ್ ಆಗಿದೆ.

ಆರ್ ಬಿ‌ ಐ 2 ಸಾವಿರ ರೂಪಾಯಿ ನೋಟು ಚಲಾವಣೆಯಲ್ಲಿರುತ್ತದೆ ಎಂದು ಗಡುವು ನೀಡಿದ್ದರೂ ಕೆಲವರು ಗಾಬರಿಗೊಂಡಿದ್ದು, 2 ಸಾವಿರ ರೂಪಾಯಿ ನೋಟು ಇನ್ಮುಂದೆ ಮೌಲ್ಯ ಕಳೆದುಕೊಳ್ಳಲಿದೆ ಎಂದು ಗಾಬರಿಯಾಗಿರುವುದರಿಂದ ಇಂತಹ ಘಟನೆ ಸಂಭವಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...