ನೋಟು ವಾಪಸ್ ನೀಡುವ ಪ್ರಕ್ರಿಯೆಯಲ್ಲಿ ಜನ ಇದೀಗ ಹೆಚ್ಚೆಚ್ಚಾಗಿ 2 ಸಾವಿರ ರೂಪಾಯಿ ನೋಟನ್ನು ಚಲಾವಣೆ ಮಾಡ್ತಿದ್ದಾರೆ. ಇಷ್ಟು ದಿನ ಚಲಾವಣೆಯಾಗದ 2 ಸಾವಿರ ರೂಪಾಯಿ ನೋಟು ಆರ್ ಬಿ ಐ ಪ್ರಕಟಣೆ ಬಳಿಕ ಹೆಚ್ಚಾಗಿ ಚಲಾವಣೆಯಾಗ್ತಿದೆ. ಇಂತಹ ಪ್ರಕ್ರಿಯೆಯೊಂದರಲ್ಲಿ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.
ಪೆಟ್ರೋಲ್ ಹಾಕಿಸಿಕೊಂಡ ಬಳಿಕ 2 ಸಾವಿರ ರೂಪಾಯಿ ನೋಟು ನೀಡಿದ ಗ್ರಾಹಕರ ಸ್ಕೂಟರ್‌ನಿಂದ ಬಂಕ್ ಸಿಬ್ಬಂದಿ ಪೆಟ್ರೋಲ್ ವಾಪಸ್ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ. ಈ ವಿಡಿಯೋ ವೈರಲ್ ಆಗಿದೆ.
ಆರ್ ಬಿ ಐ 2 ಸಾವಿರ ರೂಪಾಯಿ ನೋಟು ಚಲಾವಣೆಯಲ್ಲಿರುತ್ತದೆ ಎಂದು ಗಡುವು ನೀಡಿದ್ದರೂ ಕೆಲವರು ಗಾಬರಿಗೊಂಡಿದ್ದು, 2 ಸಾವಿರ ರೂಪಾಯಿ ನೋಟು ಇನ್ಮುಂದೆ ಮೌಲ್ಯ ಕಳೆದುಕೊಳ್ಳಲಿದೆ ಎಂದು ಗಾಬರಿಯಾಗಿರುವುದರಿಂದ ಇಂತಹ ಘಟನೆ ಸಂಭವಿಸಿದೆ.