ತನ್ನ ಮುದ್ದಿನ ಸಾಕು ಮೊಲವು ಅತ್ಯಂತ ದುಬಾರಿ ರುಚಿ ಹೊಂದಿದೆ ಎಂದು ಅದರ ಮಾಲೀಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅದು ತಿನ್ನೋದೇನು ಗೊತ್ತಾ..?
35 ವರ್ಷದ ಸಾರಾ ಹೋಲಿಂಗ್ ಎಂಬಾಕೆ, ಬಿಂಕ್ಸ್ ಎಂಬ ಆರು ತಿಂಗಳ ವಯಸ್ಸಿನ ಪುಟ್ಟ ಮೊಲವನ್ನು ಸಾಕುತ್ತಿದ್ದಾಳೆ. ಬಿಂಕ್ಸ್ ಎಲ್ಲವನ್ನೂ ಜಗಿಯುವ ಹೊಸ ಅಭ್ಯಾಸವನ್ನು ಬೆಳೆಸಿಕೊಂಡಿದೆಯಂತೆ. ಸಾರಾಳ 2 ಲಕ್ಷ ರೂ. ಮೌಲ್ಯದ ಡಿಸೈನರ್ ಬ್ಯಾಗ್ ಮತ್ತು ಬೂಟುಗಳನ್ನು ಕೂಡ ಅಗಿದು ಹಾಕಿದೆಯಂತೆ. ಅಷ್ಟೇ ಯಾಕೆ ಮಾಲೀಕಳ ತಲೆಗೂದಲನ್ನು ಕೂಡ ಬಿಂಕ್ಸ್ ಬಿಟ್ಟಿಲ್ಲ..!
ಇನ್ಮುಂದೆ ತಾನು ದುಬಾರಿ ವಸ್ತು ಖರೀದಿಸಲು ಸಾಧ್ಯವಾಗುವುದಿಲ್ಲ ಅಂತಾ ಸಾರಾ ಹೇಳುತ್ತಿದ್ದಾರೆ. ಎಲ್ಲವನ್ನೂ ಬಿಂಕ್ಸ್ ತಿಂದು ಬಿಟ್ಟರೆ ಏನು ಪ್ರಯೋಜನ ಹೇಳಿ..?
ಲಾಕ್ ಡೌನ್ ಸಮಯದಲ್ಲಿ ಸಾರಾ ತನ್ನ ಕೂದಲಿಗೆ ಕತ್ತರಿ ಹಾಕದೆ ಉದ್ದ ಬಿಟ್ಟಿದ್ದಳಂತೆ. ಆದ್ರೆ ಒಂದು ರಾತ್ರಿ ಮಲಗಿದ್ದಾಗ ಮೆಲ್ಲನೆ ಬಂದ ಬಿಂಕ್ಸ್ ಈಕೆಯ ತಲೆಗೂದಲನ್ನು ತಿನ್ನಲು ಶುರುಮಾಡಿದೆ. ಇದರಿಂದ ತನಗೆ ನಗಬೇಕೋ, ಅಳಬೇಕೋ ಎಂದೇ ತಿಳಿಯುತ್ತಿಲ್ಲ ಅಂತಾ ಸಾರಾ ಹೇಳಿದ್ದಾಳೆ.