alex Certify ಮೂತ್ರಪಿಂಡದ ಸಮಸ್ಯೆ ಇರುವವರು ಈ ಆಹಾರದಿಂದ ದೂರವಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂತ್ರಪಿಂಡದ ಸಮಸ್ಯೆ ಇರುವವರು ಈ ಆಹಾರದಿಂದ ದೂರವಿರಿ

ಮೂತ್ರಪಿಂಡದ ಕ್ಯಾನ್ಸರ್ ನಿಂದ ಬಳಲುತ್ತಿರುವವರು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇಲ್ಲವಾದರೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಮೂತ್ರಪಿಂಡದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು ಈ ಆಹಾರಗಳನ್ನು ಸೇವಿಸಬೇಡಿ.

*ಮೂತ್ರಪಿಂಡದ ಸಮಸ್ಯೆ ಇರುವವರು ಹೆಚ್ಚು ಪ್ರೋಟೀನ್ ನನ್ನು ಸೇವಿಸಬೇಡಿ. ಯಾಕೆಂದರೆ ಮೂತ್ರಪಿಂಡ ದೇಹದಲ್ಲಿರುವ ತ್ಯಾಜ್ಯವನ್ನು ಪಿಲ್ಟರ್ ಮಾಡುತ್ತದೆ. ಮೂತ್ರಪಿಂಡದ ಸಮಸ್ಯೆ ಇದ್ದಾಗ ತ್ಯಾಜ್ಯ ಹೊರಹೋಗದೆ ಪ್ರೋಟೀನ್ ಅಧಿಕವಾಗಿ ಇನ್ನಿತರ ಸಮಸ್ಯೆಗೆ ಕಾರಣವಾಗಬಹುದು.

*ಮೂತ್ರಪಿಂಡ ಸರಿಯಾಗಿ ಕೆಲಸ ಮಾಡದಿದ್ದಾಗ ಅತಿಯಾಗಿ ದ್ರವ ರೂಪದ ಆಹಾರವನ್ನು ಸೇವಿಸಬೇಡಿ. ಇದರಿಂದ ಅಧಿಕ ರಕ್ತದೊತ್ತಡ, ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು.

*ಮೂತ್ರಪಿಂಡದ ಸಮಸ್ಯೆ ಇದ್ದಾಗ ಅತಿಯಾಗಿ ಉಪ್ಪನ್ನು ಸೇವಿಸಬೇಡಿ. ಹಾಗೇ ಸಂಸ್ಕರಿಸಿದ ತಿಂಡಿಗಳು, ಮಸಾಲೆ ಪದಾರ್ಥಗಳನ್ನು ಸೇವಿಸಬೇಡಿ. ಯಾಕೆಂದರೆ ಅವುಗಳಲ್ಲಿ ಹೆಚ್ಚು ಸೋಡಿಯಂ ಅಂಶವಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...