ಮೂತ್ರಪಿಂಡದ ಕ್ಯಾನ್ಸರ್ ನಿಂದ ಬಳಲುತ್ತಿರುವವರು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇಲ್ಲವಾದರೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಮೂತ್ರಪಿಂಡದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು ಈ ಆಹಾರಗಳನ್ನು ಸೇವಿಸಬೇಡಿ.
*ಮೂತ್ರಪಿಂಡದ ಸಮಸ್ಯೆ ಇರುವವರು ಹೆಚ್ಚು ಪ್ರೋಟೀನ್ ನನ್ನು ಸೇವಿಸಬೇಡಿ. ಯಾಕೆಂದರೆ ಮೂತ್ರಪಿಂಡ ದೇಹದಲ್ಲಿರುವ ತ್ಯಾಜ್ಯವನ್ನು ಪಿಲ್ಟರ್ ಮಾಡುತ್ತದೆ. ಮೂತ್ರಪಿಂಡದ ಸಮಸ್ಯೆ ಇದ್ದಾಗ ತ್ಯಾಜ್ಯ ಹೊರಹೋಗದೆ ಪ್ರೋಟೀನ್ ಅಧಿಕವಾಗಿ ಇನ್ನಿತರ ಸಮಸ್ಯೆಗೆ ಕಾರಣವಾಗಬಹುದು.
*ಮೂತ್ರಪಿಂಡ ಸರಿಯಾಗಿ ಕೆಲಸ ಮಾಡದಿದ್ದಾಗ ಅತಿಯಾಗಿ ದ್ರವ ರೂಪದ ಆಹಾರವನ್ನು ಸೇವಿಸಬೇಡಿ. ಇದರಿಂದ ಅಧಿಕ ರಕ್ತದೊತ್ತಡ, ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು.
*ಮೂತ್ರಪಿಂಡದ ಸಮಸ್ಯೆ ಇದ್ದಾಗ ಅತಿಯಾಗಿ ಉಪ್ಪನ್ನು ಸೇವಿಸಬೇಡಿ. ಹಾಗೇ ಸಂಸ್ಕರಿಸಿದ ತಿಂಡಿಗಳು, ಮಸಾಲೆ ಪದಾರ್ಥಗಳನ್ನು ಸೇವಿಸಬೇಡಿ. ಯಾಕೆಂದರೆ ಅವುಗಳಲ್ಲಿ ಹೆಚ್ಚು ಸೋಡಿಯಂ ಅಂಶವಿರುತ್ತದೆ.