ಕೋವಿಡ್-19 ಸಾಂಕ್ರಮಿಕದ ನಿಯಂತ್ರಣಕ್ಕೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೇವಲ ಜನಸಾಮಾನ್ಯರ ಮೇಲೆ ಮಾತ್ರ ವಿಧಿಸಲಾದ ನಿರ್ಬಂಧವೇನೋ ಎಂಬ ಬಲವಾದ ಅನುಮಾನಗಳು ಎಲ್ಲೆಡೆ ಮೂಡುತ್ತಲೇ ಇವೆ.
ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಇಲ್ಲದೇ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಚರ್ಚೆಯ ವಿಚಾರವಾಗಿದ್ದಾರೆ. ತಮ್ಮ ಕಟ್ಟಡವನ್ನು ಡೆಮಾಲಿಷ್ ಮಾಡಿದ ಬಿಎಂಸಿ ಕಚೇರಿಗೆ ಭೇಟಿ ಕೊಟ್ಟ ವೇಳೆ ಮಾಸ್ಕ್ ಇಲ್ಲದೇ ಕಾಣಿಸಿಕೊಂಡಿದ್ದರು ಕಂಗನಾ.
BIG BREAKING: ತಡವಾಗಿ ಬಹಿರಂಗವಾಯ್ತು ‘ವಿಶ್ವ’ವನ್ನೇ ಬೆಚ್ಚಿ ಬೀಳಿಸುವ ಸಂಗತಿ
ಪುರಿ ಜಗನ್ನಾಥ ಮಂದಿರಲ್ಲಿ ಭೇಟಿ ಕೊಟ್ಟ ವೇಳೆ, ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡಲು ತಮ್ಮ ಸಹೋದರಿಯೊಂದಿಗೆ ತೆರಳಿದ್ದ ಕಂಗನಾ ಈಗ ಮತ್ತೊಮ್ಮೆ ಮಾಸ್ಕ್ ಇಲ್ಲದೇ ಕಾಣಿಸಿಕೊಂಡಿದ್ದು ಮತ್ತೊಂದು ವಿವಾದಕ್ಕೆ ಗ್ರಾಸವಾಗಿದ್ದಾರೆ.
ನಿರ್ಬಂಧಗಳು ಕೇವಲ ಜನಸಾಮಾನ್ಯರಿಗೆ ಮಾತ್ರವೇ ಎಂಬ ಪ್ರಶ್ನೆಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ಮುಂಬೈ ಪೊಲೀಸರು ಆಕೆಗೆ ದಂಡ ಕಟ್ಟಲು ಚಲನ್ ಕೊಡಲಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.