alex Certify BIG BREAKING: ತಡವಾಗಿ ಬಹಿರಂಗವಾಯ್ತು ‘ವಿಶ್ವ’ವನ್ನೇ ಬೆಚ್ಚಿ ಬೀಳಿಸುವ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ತಡವಾಗಿ ಬಹಿರಂಗವಾಯ್ತು ‘ವಿಶ್ವ’ವನ್ನೇ ಬೆಚ್ಚಿ ಬೀಳಿಸುವ ಸಂಗತಿ

ಇಥಿಯೋಪಿಯಾದ ಒಂದು ಪವಿತ್ರ ಆರ್ಕ್​ನ್ನು ರಕ್ಷಣೆ ಮಾಡಲಿಕ್ಕಾಗಿ ನೂರಾರು ಜನರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಈ ಆರ್ಕ್​ ಇಥಿಯೋಪಿಯಾದ ಟೈಗ್ರೆ ಕ್ಷೇತ್ರದ ಸೇಂಟ್​ ಮೇರಿ ಚರ್ಚ್​ನ ರಕ್ಷಣಾ ಸಿಬ್ಬಂದಿಯ ಸಮ್ಮುಖದಲ್ಲಿ ಸುರಕ್ಷಿತವಾಗಿದೆ ಹಾಗೂ ಕ್ರಿಶ್ಚಿಯನ್​ ಧರ್ಮದಲ್ಲಿ ಇದನ್ನ ತುಂಬಾ ಪವಿತ್ರ ಎಂದು ನಂಬಲಾಗಿದೆ. ರಿಪೋರ್ಟ್​ಗಳ ಅನುಸಾರ, ಹೆಚ್ಚು ಕಡಿಮೆ 800 ಮಂದಿ ಸೇಂಟ್​ ಮೇರಿ ಚರ್ಚ್​ನ ಸುತ್ತ ಮುತ್ತ ಜೀವ ಬಿಟ್ಟಿದ್ದಾರೆ.  ಹಾಗೂ  ಬಹಳ ದಿನಗಳವರೆಗೂ ರಸ್ತೆಗಳಲ್ಲಿ ಇವರ ಶವಗಳು ಬಿದ್ದಿದ್ದವು ಎನ್ನಲಾಗಿದೆ.

ಗೇಟೂ ಮಾಕ್​ ಹೆಸರಿನ ಒಂದು ಯೂನಿವರ್ಸಿಟಿ ಉಪನ್ಯಾಸಕ ಈ ಗಂಭೀರ ಘಟನೆಯನ್ನ ವಿವರಿಸಿದ್ದಾರೆ. ಅವರು ಟೈಮ್ಸ್ ವೆಬ್​​ಸೈಟ್​ ಜೊತೆ ಮಾತನಾಡುತ್ತಾ, ಜನರು ಗನ್​ ಫೈರಿಂಗ್​​ ಶಬ್ದ ಕೇಳುತ್ತಿದ್ದಂತೆಯೇ ಚರ್ಚ್​ ಕಡೆಗೆ ಓಡಲು ಆರಂಭಿಸಿದರು. ಅಲ್ಲಿರುವ ಪಾದ್ರಿಗಳನ್ನ ಹಾಗೂ ಈ ಪವಿತ್ರ ಆರ್ಕ್​ನ ರಕ್ಷಣೆಗಾಗಿ ಚರ್ಚ್​ ಕಡೆ ಓಡಿದ್ದರು. ಈ ಕಾರಣದಿಂದಲೇ ಇವರೆಲ್ಲ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಈ ಘಟನೆ ನವೆಂಬರ್​ ತಿಂಗಳಲ್ಲಿ ನಡೆದಿದೆ. ಆದರೆ ಆ ಸಮಯದಲ್ಲಿ ಇಥಿಯೋಪಿಯಾದಲ್ಲಿ ಪಿಎಂ ಎಬೆ ಅಹಮದ್​​ ಇಂಟರ್ನೆಟ್​ ಹಾಗೂ ಮೊಬೈಲ್​ ನೆಟ್​ವರ್ಕ್​ ಸೇವೆಯನ್ನ ಬಂದ್​ ಮಾಡಿಸಿದ್ದರು. ಇದಾದ ಬಳಿಕ ಇಥಿಯೋಪಿಯಾಗೆ ಸಂಪೂರ್ಣ ವಿಶ್ವದ ಸಂಪರ್ಕ ಕಡಿತವಾಯ್ತು. ಆದರೆ ಈಗ ಇಂಟರ್ನೆಟ್​ ಸಹಜ ಸ್ಥಿತಿಗೆ ಬಂದಿದೆ.

ಅಹಮದ್​ ಅಧಿಕಾರಕ್ಕೆ ಬರೋದಕ್ಕೂ ಮುನ್ನ ಇಥಿಯೋಪಿಯಾದಲ್ಲಿ ಟೈಗ್ರೆ ಪೀಪಲ್ಸ್ ಲಿಬರೇಷನ್​ ಆರ್ಮಿ 27 ವರ್ಷಗಳ ಕಾಲ ಆಡಳಿತವನ್ನ ನಡೆಸಿತ್ತು. ಟೈಗ್ರೆ ಪ್ರದೇಶದ ಜನಸಂಖ್ಯೆ ಇಡೀ ದೇಶದ ಜನಸಂಖ್ಯೆಯ ಶೇಕಡಾ 6ರಷ್ಟಿದ್ದರೂ , ಇವರ ಅಧಿಕಾರದ ಅವಧಿಯಲ್ಲಿ ದೊಡ್ಡ ಪ್ರಮಾಣ ಭ್ರಷ್ಟಾಚಾರ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದ್ದರೂ ಆ ಪ್ರದೇಶದ ರಾಷ್ಟ್ರ ರಾಜಕಾರಣದಲ್ಲಿ ಟೈಗ್ರೆ ಪೀಪಲ್ಸ್ ಲಿಬರೇಷನ್​​ ಪ್ರಾಬಲ್ಯ ಹೊಂದಿದೆ. ಇದು ಟಿಪಿಎಲ್​​ಎಫ್​ ಸರ್ಕಾರವನ್ನ ಜನಪ್ರಿಯಗೊಳಿಸಲಿಲ್ಲ ಹಾಗೂ 2018ರಲ್ಲಿ ಅಹಮದ್​ ಅಧಿಕಾರವನ್ನ ಅಲಂಕರಿಸಿದ್ರು.

ಟೈಗ್ರೆ ಪ್ರದೇಶದಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಬಳಿಕ ಪ್ರಧಾನಿ ಎಬೆ ಅಹಮದ್​ ಈ ಪ್ರದೇಶದ ಮೇಲೆ ಕ್ರಮ ಕೈಗೊಳ್ಳುವಂತೆ ಸೇನೆಗೆ ಆದೇಶ ನೀಡಿದ್ರು. ಪ್ರಧಾನಿ ಆದೇಶದ ಬಳಿಕ ಟೈಗ್ರೆ ಪ್ರದೇಶದ ಮುಖ್ಯ ರಾಜಕೀಯ ಪಕ್ಷವು ಸೈನ್ಯದ ಉತ್ತರ ಕಮಾಂಡ್​ ಹುದ್ದೆಯನ್ನ ಆಕ್ರಮಿಸಿಕೊಳ್ಳೋಕೆ ಅಲ್ಲಿನ ಪಡೆಗಳಿಗೆ ಆದೇಶ ನೀಡಿತು. ಸ್ಥಳೀಯ ಪಡೆಗಳು ಸೈನಿಕರನ್ನ ಬಂಧಿಸಿದರು. ಅಂದಿನಿಂದ ಈ ಪ್ರದೇಶದಲ್ಲಿ ಯುದ್ಧದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಕೊರೊನಾ ಅವಧಿಯಲ್ಲಂತೂ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...