alex Certify Watch Video | ಅರ್ಧಕ್ಕೆ ನಿಂತ ಲುಂಬರ್​ಜಾಕ್ : ತಲೆಕೆಳಗಾಗಿ ನೇತಾಡಿದ ಸವಾರರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಅರ್ಧಕ್ಕೆ ನಿಂತ ಲುಂಬರ್​ಜಾಕ್ : ತಲೆಕೆಳಗಾಗಿ ನೇತಾಡಿದ ಸವಾರರು..!

ಕೆನಡಾದ ಅಮ್ಯೂಸ್​ಮೆಂಟ್​ ಪಾರ್ಕ್​ನಲ್ಲಿ ಜೈಂಟ್​ ವೀಲ್​ ಆಡುತ್ತಿದ್ದ ಸಂದರ್ಭದಲ್ಲಿ ಅದು ಅರ್ಧದಲ್ಲೇ ನಿಂತ ಪರಿಣಾಮ ಅದರೊಳಗೆ ಇದ್ದವರು ಅರ್ಧ ಗಂಟೆಗಳ ಕಾಲ ತಲೆಕೆಳಗಾಗಿ ಸಿಲುಕಿಕೊಂಡಿದ್ದು ಭಯಾನಕ ಅನುಭವ ಅನುಭವಿಸಿದ್ದಾರೆ.

ಒಂಟಾರಿಯೋದಲ್ಲಿರುವ ವಂಡರ್​ಲ್ಯಾಂಡ್​ ಅಮ್ಯೂಸ್​ಮೆಂಟ್​ ಪಾರ್ಕ್​ನಲ್ಲಿ ಶನಿವಾರ ರಾತ್ರಿ 10:40ಕ್ಕೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಲುಂಬರ್​ಜಾಕ್​ರೈಡ್​ ಮಾಡುತ್ತಿದ್ದ ಪ್ರವಾಸಿಗರು ಈ ಭಯಾನಕ ಅನುಭವ ಅನುಭವಿಸಿದ್ದಾರೆ.

ಸುಮಾರು ಅರ್ಧಗಂಟೆಯ ಬಳಿಕ ಸವಾರರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. 30 ನಿಮಿಷಗಳ ಕಾಲ ತಲೆ ಕೆಳಗಾಗಿ ನೇತಾಡಿದ್ದರಿಂದ ಅನೇಕ ಸವಾರರು ಅಸ್ವಸ್ಥರಾಗಿದ್ದರು ಎನ್ನಲಾಗಿದೆ.

ಅಲ್ಲದೇ ಈ ಸವಾರಿ ಮಾಡುತ್ತಿದ್ದ ಇಬ್ಬರಿಗೆ ಎದೆನೋವು ಕಾಣಿಸಿಕೊಂಡಿತ್ತು. ಇವರನ್ನು ಕೂಡಲೇ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಅಮ್ಯೂಸ್​ಮೆಂಟ್​ ಪಾರ್ಕ್ ನೀಡಿದ ಹೇಳಿಕೆಯ ಪ್ರಕಾರ ಹೆಚ್ಚಿನ ವೈದ್ಯಕೀಯ ಆರೈಕೆ ಮಾಡದೆಯೇ ಇವರನ್ನು ಡಿಸ್ಚಾರ್ಜ್​ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...