alex Certify ʼಕೊರೊನಾʼ ಭಯವುಳ್ಳವರ ಕುರಿತು ಅಧ್ಯಯನದಲ್ಲಿ ಬಯಲಾಯ್ತು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಭಯವುಳ್ಳವರ ಕುರಿತು ಅಧ್ಯಯನದಲ್ಲಿ ಬಯಲಾಯ್ತು ಮಹತ್ವದ ಮಾಹಿತಿ

ಕೊರೊನಾ ಸೋಂಕು ಬರಬಹುದು ಎಂಬ ಭಯವುಳ್ಳವರು ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರುವವರ ತಪ್ಪುಗಳನ್ನ ಹೆಚ್ಚಾಗಿ ಗುರುತಿಸುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ. ನಮ್ಮ ಭಾವನೆಗಳು ಹಾಗೂ ಅಂತಃ ಪ್ರಜ್ಞೆಗಳಿಗೆ ಪರಸ್ಪರ ಸಂಬಂಧವಿದೆ.

ಇದರಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಹಾಗೂ ಸುರಕ್ಷತೆ ಕೂಡ ಸೇರಿದೆ. ಹೀಗಾಗಿ ತಪ್ಪು ಮಾಡುವವರನ್ನ ಖಂಡಿಸುವ ನಮ್ಮ ಬುದ್ಧಿಯು ಸಂಪೂರ್ಣ ತರ್ಕಬದ್ಧವೇ ಆಗಿರಬೇಕು ಎಂದೇನಿಲ್ಲ. ಇದು ನಮ್ಮ ಭಾವನೆ ಕೂಡ ಆಗಿರಬಹುದು ಎಂದು ಬ್ರಿಟನ್​​ನ ಕ್ಯಾಂಬ್ರಿಡ್ಜ್​ ವಿಶ್ವವಿದ್ಯಾಲಯದ ಅಧ್ಯಯನವು ಹೇಳಿದೆ.

ಕೋವಿಡ್ ಲಸಿಕೆ ಪಡೆದ ಬಳಿಕ ದೀರ್ಘಾಯುಷ್ಯದ ಗುಟ್ಟು ಬಿಚ್ಚಿಟ್ಟ 125 ವರ್ಷದ ವೃದ್ದ

ಜರ್ನಲ್ ಎವಲ್ಯೂಷನರಿ ಸೈಕಾಲಜಿಯಲ್ಲಿ ಈ ಅಧ್ಯಯನದ ವರದಿಯು ಪ್ರಕಟವಾಗಿದೆ. ಕಳೆದ ವರ್ಷದ ಮಾರ್ಚ್​ ಹಾಗೂ ಮೇ ತಿಂಗಳಿನಲ್ಲಿ ಅಮೆರಿಕದ 900 ಮಂದಿಯ ಮೇಲೆ ಈ ಅಧ್ಯಯನವನ್ನ ನಡೆಸಲಾಗಿತ್ತು.

ಕಪ್‌ ಸಿಗಿಸಿಕೊಂಡು ಪರದಾಡುತ್ತಿದ್ದ ಅಳಿಲಿನ ರಕ್ಷಣೆ

ಈ ಅಧ್ಯಯನದ ಪ್ರಕಾರ ಕೋವಿಡ್​ 19 ಅಪಾಯಗಳ ಬಗ್ಗೆ ಹೆಚ್ಚು ಭಯ ಹೊಂದಿರುವವರು ಸಾರ್ವಜನಿಕವಾಗಿ ನಿರ್ಲಕ್ಷ್ಯ ತೋರುವವರನ್ನ ಹೆಚ್ಚಾಗಿ ಖಂಡಿಸುತ್ತಾರೆ. ಅವರ ನಿರ್ಲಕ್ಷ್ಯದಿಂದಾಗಿ ತಮಗೆ ಹಾನಿ ಆಗಬಹುದು ಎಂಬ ಭಯ ಇಂತವರಲ್ಲಿ ಹೆಚ್ಚಾಗಿ ಕಾಡುತ್ತೆ ಎಂದು ಈ ಅಧ್ಯಯನ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...