ಕೊರೊನಾ ಸೋಂಕಿನ ಭಯದಿಂದಾಗಿ ಕಳೆದ ಆರು ತಿಂಗಳಿಂದ ಮನೆಯ ಹೊರಗಿನ ಆಹಾರಗಳ ಸೇವನೆಗೆ ಹಿಂದೆ-ಮುಂದೆ ನೋಡುತ್ತಿದ್ದ ಜನರು ಸದ್ಯಕ್ಕೆ ಕೊಂಚ ರಿಲ್ಯಾಕ್ಸ್ ಆದಂತಿದೆ. ಕೊರೊನಾ ತಡೆ ಲಸಿಕೆಯ ಡೋಸ್‍ಗಳನ್ನು ಪಡೆದವರು ಕೊರೊನಾ ಭಯದಿಂದ ಹೊರಬಂದು ಸಾಧಾರಣವಾಗಿಯೇ ಹೋಟೆಲ್, ಚ್ಯಾಟ್ಸ್ ಕಾರ್ನರ್‍ಗಳ ಮುಂದೆ ಸಾಲುಗಟ್ಟುತ್ತಿದ್ದಾರೆ. ರಾತ್ರಿ 9ರ ನಂತರ ರಾತ್ರಿ ಕರ್ಫ್ಯೂ ಇದ್ದರೂ ಸಂಜೆ 6-9ರವರೆಗೆ ನೆಚ್ಚಿನ ಆಹಾರ ತಾಣಗಳಿಗೆ ಭೇಟಿ ನೀಡಲು ಕುಟುಂಬ ಸಮೇತ ಮುನ್ನುಗ್ಗುತ್ತಿದ್ದಾರೆ.
9ರ ನಂತರ ಹೋಮ್ ಡೆಲಿವರಿಯನ್ನು ಸ್ವಿಗ್ಗಿ, ಜೊಮ್ಯಾಟೊಗಳ ಮೂಲಕ ಪಡೆಯುವುದನ್ನು ಕೂಡ ಜನರು ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಗಾಗಿ ಹೋಮ್ ಡೆಲಿವರಿಗಳ ಪ್ರಮಾಣವು ಕೂಡ 5-10% ಏರಿಕೆ ಕಂಡಿದೆ. ಹೋಟೆಲ್ ಅಸೋಸಿಯೇಷನ್ ಮುಖಂಡರ ಪ್ರಕಾರ, ಹಲವು ಜನರು ಸದ್ಯ ಬೆಳಗ್ಗೆಯಿಂದ ಸಂಜೆವರೆಗೆ ಆಫೀಸ್‍ಗಳಿಗೆ ಹೋಗುತ್ತಿದ್ದಾರೆ.
1 ನಿಮಿಷದಲ್ಲಿ ಯುವತಿ ಬದಲಿಸಿದ ಬಟ್ಟೆ ಎಷ್ಟು ಗೊತ್ತಾ…? ದಂಗಾಗಿಸುತ್ತೆ ಇದರ ವಿಡಿಯೋ
ಸಾಫ್ಟ್ ವೇರ್ ಉದ್ಯೋಗಿಗಳಿಗೆ ಮಾತ್ರವೇ ವರ್ಕ್ ಫ್ರಮ್ ಹೋಮ್ ಸಿಕ್ಕಿದೆ. ಹಾಗಾಗಿ ಆಫೀಸ್‍ನಿಂದ ಹೊರಬಿದ್ದು, ನೈಟ್ ಕರ್ಫ್ಯೂ ಶುರುವಾಗುವಷ್ಟರಲ್ಲಿ ಮನೆ ಸೇರಿಕೊಳ್ಳುವ ಧಾವಂತದಲ್ಲಿ ಜನರು ಇರುತ್ತಾರೆ. ಇದರಿಂದಾಗಿ, ಮನೆ ಸೇರಿದ ಮೇಲೆ ಹೋಮ್ ಡೆಲಿವರಿಗೆ ಆರ್ಡರ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.