alex Certify ಮನೆ ಮಾಲೀಕರ ಕೊಂದ ನಾಯಿಗೆ ಫುಲ್ ಡಿಮ್ಯಾಂಡ್: ಪಿಟ್ ಬುಲ್ ದತ್ತು ಪಡೆಯಲು ಮುಗಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮಾಲೀಕರ ಕೊಂದ ನಾಯಿಗೆ ಫುಲ್ ಡಿಮ್ಯಾಂಡ್: ಪಿಟ್ ಬುಲ್ ದತ್ತು ಪಡೆಯಲು ಮುಗಿಬಿದ್ದ ಜನ

ಲಕ್ನೋದಲ್ಲಿ ಮನೆಯ ಹಿರಿಯ ಮಹಿಳೆ ಕೊಂದ ಪಿಟ್‌ ಬುಲ್ ನಾಯಿ ದತ್ತು ತೆಗೆದುಕೊಳ್ಳಲು ಎನ್‌.ಜಿ.ಒ.ಗಳು, ಜನ ಉತ್ಸುಕರಾಗಿದ್ದಾರೆ.

ಲಕ್ನೋದಲ್ಲಿ 82 ವರ್ಷದ ಹಿರಿಯ ಮಹಿಳಾ ಮಾಲೀಕರನ್ನು ಕೊಂದ ಪಿಟ್‌ ಬುಲ್ ನಾಯಿಯನ್ನು ದತ್ತು ತೆಗೆದುಕೊಳ್ಳಲು ಅರ್ಧ ಡಜನ್ ಎನ್‌.ಜಿ.ಒ.ಗಳು ಮತ್ತು ಸಂಸ್ಥೆಗಳು ಮುಂದೆ ಬಂದಿವೆ. ಇಷ್ಟು ಮಾತ್ರವಲ್ಲ, ಅರ್ಧ ಡಜನ್ ಜನ ಸಾಮಾನ್ಯರು ಕೂಡ ಪಿಟ್‌ ಬುಲ್ ನಾಯಿಯನ್ನು ದತ್ತು ಪಡೆಯಲು ನಗರಸಭೆಯನ್ನು ಸಂಪರ್ಕಿಸಿದ್ದಾರೆ.

ನಿವೃತ್ತ ಶಿಕ್ಷಕಿ, ಜಿಮ್ ತರಬೇತುದಾರನಾದ ಮಗ ಮತ್ತು ಅವರ ಎರಡು ಸಾಕು ನಾಯಿಗಳೊಂದಿಗೆ ವಾಸಿಸುತ್ತಿದ್ದರು. ಲಕ್ನೋದ ಕೈಸರ್‌ ಬಾಗ್ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ಪಿಟ್‌ ಬುಲ್ ಮತ್ತು ಲ್ಯಾಬ್ರಡಾರ್ ತಳಿ ನಾಯಿಗಳಿದ್ದವು. ಮೂರು ವರ್ಷಗಳ ಹಿಂದೆ ಮನೆಗೆ ತರಲಾಗಿದ್ದ ಬ್ರೌನಿ ಎಂಬ ಪಿಟ್ ಬುಲ್ ನಾಯಿ ಶಿಕ್ಷಕಿ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್(LMC) ನಾಯಿಯನ್ನು ನಗರ ನಿಗಮ್‌ ನ ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರಕ್ಕೆ ಸ್ಥಳಾಂತರಿಸಿತು. ಅದರ ನಡವಳಿಕೆ ಪರೀಕ್ಷಿಸಲು ಕೇಂದ್ರದ ನಾಲ್ವರು ಸದಸ್ಯರು ನಿಯೋಜಿತರಾಗಿದ್ದಾರೆ. ಈಗ, ಅನೇಕ ಎನ್‌.ಜಿ.ಒ.ಗಳು ಮತ್ತು ಸಾಮಾನ್ಯ ಜನರು ಮಾಲೀಕಳ ಮೇಲೆ ದಾಳಿ ಮಾಡಿ ಕೊಂದ ನಾಯಿಯನ್ನು ದತ್ತು ತೆಗೆದುಕೊಳ್ಳಲು ಆಸಕ್ತಿ ಹೊಂದಿದ್ದಾರೆ.

ಪಾಲಿಕೆಯ ಜಂಟಿ ನಿರ್ದೇಶಕ ಡಾ.ಅರವಿಂದ್ ರಾವ್ ಅವರ ಪ್ರಕಾರ, ಪಿಟ್‌ ಬುಲ್ ಅನ್ನು ಅದರ ಮಾಲೀಕ ಅಮಿತ್‌ಗೆ ಮರಳಿ ನೀಡುವಂತೆ ಮೇನಕಾ ಗಾಂಧಿ ಅಧಿಕಾರಿಗಳಿಗೆ ಸೂಚಿಸಿದ್ದು, ಪಾಲಿಕೆ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು, ದೆಹಲಿ, ಲಕ್ನೋ ಮತ್ತು ದೇಶದ ಇತರ ಭಾಗದ ಎನ್‌.ಜಿ.ಒ.ಗಳು ಸೇರಿದಂತೆ ಪಿಟ್‌ ಬುಲ್ ಅನ್ನು ದತ್ತು ಪಡೆಯಲು ಅರ್ಧ ಡಜನ್ ಎನ್‌.ಜಿ.ಒ.ಗಳು ಮುನ್ಸಿಪಲ್ ಕಾರ್ಪೊರೇಷನ್ ಅನ್ನು ಸಂಪರ್ಕಿಸಿವೆ.

ಇದಲ್ಲದೆ, ಲಕ್ನೋದ ಸುಮಾರು ಆರು ಜನರು ಮುನ್ಸಿಪಲ್ ಕಾರ್ಪೊರೇಶನ್‌ ನಿಂದ ಪಿಟ್‌ಬುಲ್ ಅನ್ನು ದತ್ತು ತೆಗೆದುಕೊಳ್ಳಲು ಆಸಕ್ತಿ ತೋರಿಸಿದ್ದಾರೆ.

ಪಶುವೈದ್ಯಾಧಿಕಾರಿ ಅಭಿನವ್ ವರ್ಮಾ ಪ್ರಕಾರ, ನಾಯಿಯನ್ನು ದತ್ತು ಪಡೆಯಲು ಅನೇಕ ಎನ್‌.ಜಿ.ಒ.ಗಳು ನಿರಂತರವಾಗಿ ಸಂಪರ್ಕದಲ್ಲಿವೆ. ಲಕ್ನೋದಿಂದ ಹಲವಾರು ಇತರ ಸಾಮಾನ್ಯ ಜನರು ಪಿಟ್‌ಬುಲ್ ಅನ್ನು ದತ್ತು ಪಡೆಯಲು ಸಂಪರ್ಕಿಸಿದ್ದಾರೆ. ಆದರೆ, ಮುನ್ಸಿಪಲ್ ಕಾರ್ಪೊರೇಶನ್ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಿದ್ದು, ನಂತರ ದತ್ತು ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...