ಚಳಿಗಾಲದಲ್ಲಿನ ಚಳಿಗೆ ಶಪಿಸುವವರೇ ಹೆಚ್ಚು ಮಂದಿ. ಆದರೆ ಚಳಿ ಎಂದರೇನು ಎಂದು ನಿಮಗೆ ಗೊತ್ತಿಲ್ಲದಿದ್ದರೆ ಈ ವಿಡಿಯೋವನ್ನು ಒಮ್ಮೆ ನೋಡಿಬಿಡಿ. ಆಗ ನೀವು ಅನುಭವಿಸುತ್ತಿರುವ ಚಳಿಯ ಬಗ್ಗೆ ಬೈದುಕೊಳ್ಳುವುದೇ ಇಲ್ಲ.
ಈ ವಿಡಿಯೋ ಸಿಯಾಟಲ್‌ನದ್ದು. ವರ್ಷಪೂರ್ತಿ ಮಳೆಯಿಂದ ಆವೃತವಾಗಿರುವ ನಗರವು ದಶಕದಲ್ಲೇ ಅತ್ಯಂತ ಭೀಕರವಾದ ಶೀತಲೀಕರಣದ ಮಳೆಗೆ ಸಿಲುಕಿದೆ.
ಅದರ ವಿಡಿಯೋ ವೈರಲ್ ಆಗಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಹಿಮಾವೃತವಾಗಿರುವುದನ್ನು ಕಾಣಬಹುದು. ಕೈಕಾಲುಗಳೆಲ್ಲವೂ ಹಿಮದಿಂದ ಕೂಡಿದೆ.
ಜನರ ಪರಿಸ್ಥಿತಿ ಅಧೋಗತಿಯದ್ದಾಗಿದೆ. ಇನ್ನು ವಾಹನಗಳ ಪಾಡಂತೂ ಕೇಳುವುದೇ ಬೇಡ. ಅವು ರಸ್ತೆಗೆ ಇಳಿದವು ಎಂದರೆ ಜನರು ಸುರಕ್ಷಿತವಾಗಿ ವಾಪಸ್ ಬರುವುದು ಕಷ್ಟ ಎನಿಸುವಂತಿದೆ. ಈ ವಿಡಿಯೋ ನೋಡಿ ಜನರು ದಂಗಾಗಿದ್ದಾರೆ. ಎಷ್ಟು ಭಯಾನಕ ಎಂದು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
https://twitter.com/HaveYouHadAbeer/status/1606681589551104000?ref_src=twsrc%5Etfw%7Ctwcamp%5Etweetembed%7Ctwterm%5E1606681589551104000%7Ctwgr%5Ebd67f0c3a721410749fa7c59d5fb22146f161886%7Ctwcon%5Es1_&ref_url=https%3A%2F%2Fwww.news18.com%2Fbuzz%2Fpeople-in-seattle-hit-with-worst-freezing-rain-in-a-decade-are-slipping-and-sliding-on-roads-6695005.html