alex Certify ಕಳೆದ 11 ವರ್ಷಗಳಿಂದ ಗರ್ಭ ಧರಿಸುತ್ತಲೇ ಇದ್ದಾರೆ ಈ ಮಹಾತಾಯಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳೆದ 11 ವರ್ಷಗಳಿಂದ ಗರ್ಭ ಧರಿಸುತ್ತಲೇ ಇದ್ದಾರೆ ಈ ಮಹಾತಾಯಿ..!

ಮಕ್ಕಳಿರಲವ್ವಾ ಮನೆ ತುಂಬಾ ಎಂಬ ಮಾತಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ನಿಂತಿದ್ದಾಳೆ ನ್ಯೂ ಮೆಕ್ಸಿಕೋದಲ್ಲಿ ವಾಸಿಸುತ್ತಿರುವ ಈ 11 ಮಕ್ಕಳ ತಾಯಿ..! ಈಕೆ ಗರ್ಭ ನಿರೋಧಕ ಅಥವಾ ಇನ್ನಿತರ ಯಾವುದೇ ಜನನ ನಿಯಂತ್ರಣಗಳನ್ನು ಬಳಸದ ಕಾರಣಕ್ಕಾಗಿ ಕಳೆದ 11 ವರ್ಷಗಳಿಂದ ಗರ್ಭಿಣಿಯಾಗುತ್ತಲೇ ಇದ್ದಾಳೆ. ಇದೇ ಕಾರಣಕ್ಕಾಗಿ ಸೋಶಿಯಲ್​ ಮೀಡಿಯಾದಲ್ಲಿ ಈ ಮಹಿಳೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾಳೆ.

ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೋಲ್​ ಆಗುತ್ತಿರುವ ಬಗ್ಗೆ ಮಾತನಾಡಿದ ರೋಜರ್ಸ್, ಅನೇಕರು ದೊಡ್ಡ ಪರಿವಾರವನ್ನು ಇಷ್ಟಪಡೋದಿಲ್ಲ. ಆದರೆ ಅವರೆಲ್ಲ ಅಪರಿಚಿತರು. ಅವರಿಗೆ ನಮ್ಮ ಬಗ್ಗೆ ಏನೂ ತಿಳಿದಿಲ್ಲ. ಹೀಗಾಗಿ ಟ್ರೋಲಿಗರ ಟೀಕೆಗೆಲ್ಲ ನಾನು ತಲೆಕೆಡಿಸಿಕೊಳ್ಳೋದಿಲ್ಲ ಎಂದು ಹೇಳಿದ್ದಾರೆ.

37 ವರ್ಷದ ರೋಜರ್ಸ್​ 2008ರ ಅಕ್ಟೋಬರ್​ನಲ್ಲಿ ಕ್ರಿಸ್​ ಎಂಬವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಿನಿಂದ ಇಂದಿನವರೆಗೆ ಅವರು ಪ್ರತಿ ವರ್ಷವೂ ಗರ್ಭಿಣಿಯಾಗುತ್ತಲೇ ಇದ್ದಾರೆ. ಇದೀಗ ರೋಜರ್ಸ್ ತಮ್ಮ 12 ನೇ ಮಗುವನ್ನು ಗರ್ಭದಲ್ಲಿಟ್ಟುಕೊಂಡಿದ್ದಾರೆ. ಮಾರ್ಚ್​ನಲ್ಲಿ ರೋಜರ್ಸ್ 12ನೇ ಮಗುವಿಗೆ ಜನ್ಮ ನೀಡಲಿದ್ದಾರೆ.

11 ವರ್ಷದ ಕ್ಲಿಂಟ್​, 10 ವರ್ಷದ ಕೇಡ್​, 9 ವರ್ಷದ ಕ್ಯಾಲಿ, 8 ವರ್ಷದ ಕ್ಯಾಶ್​, 7 ವರ್ಷದ ಕೋಲ್ಟ್​, 6 ವರ್ಷದ ಕೇಸ್​, 5 ವರ್ಷದ ಕೆಲೆನಾ, 4 ವರ್ಷದ ಕಯಡೆ, 3 ವರ್ಷದ ಕೊರಾಲಿ, ಕ್ಯಾರಿಸ್​ ಇನ್ನೇನು ಕೆಲವೇ ದಿನಗಳಲ್ಲಿ 1 ವರ್ಷಕ್ಕೆ ಕಾಲಿಡಲಿದ್ದಾನೆ. ತನ್ನ 11 ಮಕ್ಕಳ ಆರೈಕೆಯನ್ನು ರೋಜರ್ಸ್ ಒಬ್ಬರೇ ಮಾಡುತ್ತಾರೆ. ಮಕ್ಕಳಿಗೆ ಮನೆಯಲ್ಲೇ ಶಿಕ್ಷಣ ನೀಡುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...